UPSC: ಕರ್ನಾಟಕದ ರೈತರ ಮಕ್ಕಳ ಸಾಧನೆ, ಹಾವೇರಿ ವೈದ್ಯ ಸಚಿನ್ ಗುತ್ತೂರಗೆ 41ನೇ ರ‍್ಯಾಂಕ್​

Sampriya

ಮಂಗಳವಾರ, 22 ಏಪ್ರಿಲ್ 2025 (19:10 IST)
Photo Courtesy X
ಬೆಂಗಳೂರು:  ಕೇಂದ್ರ ಲೋಕಸೇವಾ ಆಯೋಗ 2024ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ. 10ಕ್ಕೂ ಅಧಿಕ ಕನ್ನಡಿಗರು ಸೇರಿದಂತೆ 1009 ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಯಾಗ್​ರಾಜ್​ ನಿವಾಸಿ ಶಕ್ತಿ ದುಬೆ ಪ್ರಥಮ ರ‍್ಯಾಂಗ್‌ ಗಳಿಸಿದ್ದಾರೆ.

ಕರ್ನಾಟಕ ಹಲವು ಮಂದಿ ಯುಪಿಎಸ್​ಸಿ ಪರೀಕ್ಷೆಗೆ ಹಾಜರಾಗಿದ್ದರು. ಲಭ್ಯವಿರುವ ಮಾಹಿತಿ ಪ್ರಕಾರ ಕರ್ನಾಟಕದ 11 ಮಂದಿ ತೇರ್ಗಡೆ ಹೊಂದಿದ್ದಾರೆ. ಕರ್ನಾಟಕದ ಆರ್‌. ಮಂಜುನಾಥ್‌ ಎಂಬುವರು 24ನೇ ರ‍್ಯಾಂಕ್‌ ಪಡೆದಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿ ಸಚಿನ್ ಗುತ್ತೂರು ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸ್ತಿರುವ ಸಚಿನ್ ಬಸವರಾಜ ಗುತ್ತೂರ ಅವರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ‌ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಪಾಂಡುರಂಗ ಸದಾಶಿವ ಕಂಬಳಿ 529ನೇ ರ‍್ಯಾಂಕ್​ ಪಡೆದಿದ್ದಾರೆ. ಪಾಡುರಂಗ ಅವರು ಕಳೆದ ಒಂದು ವರ್ಷದಿಂದ ಐಎಫ್​ಎಸ್​ನಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪಾಡುರಂಗ ಅವರು ಐದನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಪಾಂಡುರಂಗ ಕಂಬಳಿ ರೈತರ ಪುತ್ರರಾಗಿದ್ದಾರೆ.  

ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ರೈತ ಆನಂದ್ ಹಾಗೂ ಸುಶೀಲಮ್ಮ ದಂಪತಿ ಪುತ್ರ ಎ.ಮಧು ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ 544ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿಎಸ್​ಸಿ ಅಗ್ರಿಕಲ್ಚರ್​ನಲ್ಲಿ ಮಧು ಅವರು ಪದವಿ ಪಡೆದಿದ್ದಾರೆ.

ಕರ್ನಾಟಕದ ಆರ್ ರಂಗಮಂಜು 24ನೇ, ಸಚಿನ್ ಹರಿಹರ 41ನೇ, ಅನುಪ್ರಿಯಾ ಸಖ್ಯ 120ನೇ, ಬಿಎಂ ಮೇಘನಾ 425ನೇ, ಮಾಧವಿ ಆರ್ 446ನೇ, ಭರತ್ ಸಿ ಯಾರಂ 567ನೇ,    ಭಾನುಪ್ರಕಾಶ್ 523ನೇ, ನಿಖಿಲ್ ಎಂಆರ್ 724ನೇ, ಟಿ ವಿಜಯ್ ಕುಮಾರ್ 894ನೇ, ಹನುಮಂತಪ್ಪ ನಂದಿ 910ನೇ, ವಿಶಾಕ ಕದಂ 962ನೇ, ಸಂದೀಪ್ ಸಿಂಗ್ 981ನೇ, ಮೋಹನ್ ಪಾಟೀಲ್ 984ನೇ ರ‍್ಯಾಂಕ್‌ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ