ರಾಜಧಾನಿ ಬೆಂಗಳೂರಿನಲ್ಲಿ ಒಂಟಿಯಾಗಿ ಮಹಿಳೆಯರು ಓಡಾಡಲು ಭಯ ಪಡ್ತಿದ್ದಾರೆ, ರೋಡ್ ನಲ್ಲಿ ಪೋನ್ ನಲ್ಲಿ ಮಾತಾಡೋಕು ಹೆದರಿ ಬೀಳ್ತಿದ್ದಾರೆ ಬ್ಯಾಗೂ ಪರ್ಸೂ ಏನು ಬಿಡ್ತಿಲ್ಲ ,ಅಕ್ಕಪಕ್ಕದಲ್ಲಿ ಬೈಕ್ ನಲ್ಲಿ ಬರೋ ಕಿರಾತಕರು ಇವರನ್ನು ಹಿಡಿಯೋಣ ಅಂದರೆ ಕಿಲಾಡಿಗಳು ನಂಬರ್ ಬೋರ್ಡ್ ಗಳಲ್ಲಿರೋ ನಂಬರ್ ಗಳನ್ನೇ ಕಾಣಿಸ್ದಂಗೆ ಮಾಡ್ಕೊಂಡು ಓಡಾಡ್ತಿದ್ರೆ ಇತ್ತ ಪೊಲೀಸರ ಮೂರನೇ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಾನಾ ಸರ್ಕಸ್ ಮಾಡ್ತಿದ್ದಾರೆ ನೋಡಿ ಇವರುಗಳು.
ಟ್ರಾಫಿಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಿಲಾಡಿಗಳು.ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾದ ಬೈಕ್ ಸವಾರರು.ತ್ರಿಬಲ್ ರೈಡಿಂಗ್, ವಿಥ್ ಔಟ್ ಹೆಲ್ಮೆಟ್ ಹೋಗುವ ಬೈಕ್ ಸವಾರರು ಬೈಕ್ ನಂಬರ್ ನ ಕೊನೆಯ ನಂಬರ್ ಅನ್ನು ರೇಡಿಯಂ ಸ್ಟೀಕರ್ ನಿಂದ ಬಿಳಿ ಬಣ್ಣದ ಪೇಪರ್ ಗಳಿಂದ ಹಾಗೂ ಬ್ಲಾಕ್ ಪೇಂಟ್ ನಿಂದ ಮುಚ್ಚಿಕೊಂಡು ಸಂಚಾರ ಮಾಡ್ತಿದ್ರೆ, ಇತ್ತ ಕೆಲ ಬೈಕ್ ಸವಾರರಂತು ತಮ್ಮ ಕಾಲಿನಿಂದ, ಮೊಬೈಲ್ ಫೋನ್ ಗಳಿಂದ ಕ್ಲೋಸ್ ಮಾಡಿದ್ರೆ ಯುವತಿಯರು ತಮ್ಮ ವೇಲ್ಸ್ ನಿಂದ ಕ್ಲೋಸ್ ಮಾಡ್ತಿದ್ದಾರೆ .ಟ್ರಾಫಿಕ್ ಸಿಗ್ನಲ್ ನಲ್ಲಿರೋ ಸಿಸಿ ಟಿವಿ ಗಳಲ್ಲಿ ರೂಲ್ಸ್ ಬ್ರೇಕ್ ಮಾಡಿರೋದು ಗೊತ್ತಾದ್ರು ದಂಡ ಹಾಕಲು ಆಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರೋ ಟ್ರಾಫಿಕ್ ಪೊಲೀಸರು. ಟ್ರಾಫಿಕ್ ಪೊಲೀಸರ ದಂಡ ದಿಂದ ತಪ್ಪಿಸಿ ಕೊಳ್ಳಲು ವಿಚಿತ್ರ ಐಡಿಯಾಗಳ ಮೊರೆ ಹೋಗುತ್ತಿರುವ ಬಾಯ್ಸ್ ಅಂಡ್ ಗರ್ಲ್ಸ್. ಈ ಎಲ್ಲಾ ಕಿಲಾಡಿಗಳ ಎಕ್ಸ್ಕೂಸಿವ್ ಪೋಟೋ ಗಳು ಲಭ್ಯವಾಗಿವೆ .ಆದರೆ ಇಂತಹ ಬೈಕ್ ಗಳಿಂದಲೇ ನಗರದಲ್ಲಿ ಅಕ್ರಮ ಕೆಲಸ ನಡಿತಿದೆ . ಗಾಂಜಾ ಸಪ್ಲೈ ಇಂತಹ ಕೆಲಸಗಳಿಗೆ ಬಳಕೆ ಆಗ್ತಿದೆ ಕೂಡಲೇ ಇದರ ವಿರುದ್ಧ ಟ್ರಾಫಿಕ್ ಪೊಲೀಸರು ಹಾಗೂ ಆರ್ ಟಿ ಓ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಅಂತಾರೇ ಟ್ರಾಫಿಕ್ ಎಕ್ಸ್ಪರ್ಟ್ ಗಳು.
ನಗರದಲ್ಲಿ ದಿನದಿಂದ ದಿನಕ್ಕೆ ಗಾಂಜಾ, ಸಪ್ಲೈ ಮಾಡೋ ಪೆಡ್ಲರ್ ಗಳು, ಸರಗಳ್ಳರು, ಬ್ಯಾಗ್, ಪೋನ್ ಕಸಿದುಕೊಂಡು ಓಡಿ ಹೋಗುವವರ ಸಂಖ್ಯೆ ಹೆಚ್ಚಾಗ್ತಿದೆ ಇಂತಹವರಿಗೆ ಈ ಬೈಕ್ ನಂಬರ್ ಪ್ಲೇಟ್ ಟ್ಯಾಂಪರಿಂಗ್ ತುಂಬಾ ಸಹಾಯ ಆಗ್ತಿದ್ರೆ, ಪೊಲೀಸರಿಗೆ ಈ ಕಿರಾತಕರನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟ ಆಗ್ತಿರೋದಂತು ಸತ್ಯ.ಇದು ರಾಜಧಾನಿ ಪೂರ್ತಿ ಹರಡುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ .ಇಲ್ಲಾಂದ್ರೆ ಅನಾಹುತಗಳು ಆಗೋದು ಗ್ಯಾರೆಂಟಿ.