ಆರೋಗ್ಯ ಸಚಿವ ಕೆ ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ಅವ್ಯವಸ್ಥೆಯ ಅಗರವಾದ ರಸ್ತೆ

ಬುಧವಾರ, 12 ಅಕ್ಟೋಬರ್ 2022 (17:11 IST)
ಚಿಕ್ಕಬಳ್ಳಾಪುರ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯಲ್ಲೇ ಎಂ ಸ್ಯಾಂಡ್ ಟಿಪ್ಪರ್ ಲಾರಿ ಹೂತು ಹೋಗಿದೆ.ಹೀಗಾಗಿ ಎಂ ಸ್ಯಾಂಡ್  ಹಾಗೂ ಜಲಕಲಿ ತುಂಬಿಸಿಕೊಂಡು ಬರುವ ಟಿಪ್ಪರ್ ಲಾರಿಗಳ ವಿರುದ್ಧ ಊರಿನ ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ. ಹೂ ಮತ್ತು ತರಕಾರಿ ಬೆಳೆದಿರುವ ರೈತರು ಮಾರ್ಕೆಟ್ ಗೆ ತೆಗೆದುಕೊಂಡು ಹೋಗಲು ಹರಸಾಹಸ‌ ಪಾಡುವಂತಹ ಪರಿಸ್ಥಿತಿ ಇದೆ.
 
 ರಸ್ತೆಯಲ್ಲಿ ಶಾಲಾ ಕಾಲೇಜುಗಳಿದ್ದು ವಿದ್ಯಾರ್ಥಿಗಳ ಹೋಗಲು ಪರದಾಟಪಾಡುತ್ತಿದ್ದಾರೆ.ಹೈವೇ ರೋಡಿನಿಂದ ಮುದ್ದೇನಹಳ್ಳಿ, ದೊಡ್ಡಬಳ್ಳಾಪುರ, ಹಾಗೂ ಕೆಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿ ಕೊಡುವ ಮುಖ್ಯ ರಸ್ತೆ.ಓವರ್ ಲೋಡ್ ಯಿಂದ  ಐದರಿಂದ ಆರು ಹಾಡಿ ರಸ್ತೆಗೆ ಗುಣಿ ಬಿದ್ದರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್  ಎನ್ನುತ್ತಿದ್ದಾರೆ.
 
ಕುಣಿ ಬಿದ್ದ ಹಾಗೂ ಕೆಸರು ಗೆದ್ದೆಯದ ರಸ್ತೆಯಲ್ಲಿ ವಾಹನ ಸವಾರರ ಪರದಾಟ  ಹೇಳತೀರದಾಗಿದೆ.ಕಂಡೂ ಕಾಣದಂತೆ ಅಧಿಕಾರಿಗಳು ಹಾಗೂ ಜಮಪ್ರತಿನಿಧಿಗಳು ವರ್ತಿಸುತ್ತಿದ್ದಾರೆ.ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ಅವ್ಯವಸ್ಥೆ ಹೀಗಾದ್ರೆ ಹೇಗೆ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ.ಅಲ್ಲದೇ ಕೂಡಲೇ ಜಡಲ ತಿಮ್ಮನಹಳ್ಳಿ ರಸ್ತೆ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ