ಬಿ.ಬಿ.ಎಂ.ಪಿ‌ ಯ ವ್ಯಾಪ್ತಿಯಲ್ಲಿ ಇಂದಿನಿಂದ ಲಸಿಕ ಮೇಳ

ಶುಕ್ರವಾರ, 27 ಆಗಸ್ಟ್ 2021 (19:11 IST)
ರಾಜ್ಯದಲ್ಲಿ ಕೊವಿಡ್ -19 ಲಸಿಕಾಕರಣ ಹೆಚ್ಚಿಸುವ ನಿಟ್ಟಿನಲ್ಲಿ ದಿನಾಂಕ : 27-08-2021 ರಂದು( ಇಂದಿನಿಂದರಾಜ್ಯದಾದ್ಯಂತ "ಕೋವಿಡ್ -19 ಲಸಿಕಾ ಮೇಳ"ವನ್ನು ಹಮ್ಮಿಕೊಳ್ಳಲಾಗಿದ್ದು,  ಲಸಿಕಾ ಮೇಳದ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ 1,25,000 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಎಂದು‌ ಮುಖ್ಯ‌ ಆಯುಕ್ತ ಗೌರವಗುಪ್ತ‌ತಿಳಿಸಿದ್ದಾರೆ.
 
ಪಾಲಿಕೆಯ ಆಯಾ ವಲಯ ಮಟ್ಟದಲ್ಲಿ ನಿಗದಿತ ಗುರಿ ಸಾಧಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ
 
 
 
•  ಇದುವರೆಗೆ ಒಂದೂ ಡೋಸ್ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರ ಮತ್ತು ಆಶಾ ಕಾರ್ಯಕರ್ತೆ ಯರಿಗೆ ‌ಆದ್ಯತೆ.
 
•  2ನೇ ಡೋಸ್‌ಗೆ ಬಾಕಿ ಇರುವ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರ ಶೇ.100 ರಷ್ಟು ಕೊವಿಡ್ -19 ಲಸಿಕಾಕರಣ.
 
•  60 ವರ್ಷ ಮೇಲ್ಪಟ್ಟವರ 1 ನೇ ಡೋಸ್ ಹಾಗೂ 2 ನೇ ಡೋಸ್ ಲಸಿಕೆ 
 
•  ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1 ರಿಂದ 10 ನೇ ತರಗತಿ, ಪದವಿ ಪೂರ್ವ ಕಾಲ ಭೋದಕ ಭೋದಕೇತರ ಸಿಬ್ಬಂದಿಗಳು ಇನ್ನೂ ಕೋವಿಡ್-19 ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕೆ
 
• ಇತರೆ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳ ಲಸಿಕೆ ಹಾಕಿಸಿಕೊಳ್ಳಲು ಮೇಳ  ಆಯೋಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ