ಈ ಬೆಳವಣಿಗೆಗಳ ಮಧ್ಯೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಇಂದು ಅಥವಾ ನಾಳೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆಯಿದೆ. ಬಿಬಿಎಂಪಿ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತಿದೆ ಎಂದು ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಬೆಂಗಳೂರು: ಮಾರ್ಕೆಟ್ ಅದೂ ಸಿಟಿ ಮಾರ್ಕೆಟ್ ಅಂದ ಮೇಲೆ ಅಲ್ಲಿ ತಗೊಳ್ಳೀ ತಗೊಳ್ಳೀ… ರೂಪಾಯಿಗೆ ಒಂದು ಅಂತಾ ಕೂಗ್ತಾನೇ ಇರ್ತಾರೆ. ಆದರೆ ಬದಲಾದ ಕಾಲಮಾನದಲ್ಲಿ ಕೊರೊನಾ ಮಹಾಮಾರಿಗೆ ಅಂಜಿ ಸರ್ಕಾರ ಅನ್ನು ಕಟ್ಟಿಹಾಕಲು ಸರ್ವಪ್ರಯತ್ನ ಮಾಡುತ್ತಿದೆ. ಮಾರ್ಕೆಟ್ ನಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ-ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತಾ ಈಗ ಅನೌನ್ಸ್ ಮಾಡ್ತಿದ್ದಾರೆ. ಜೊತೆಗೆ ಮಾರ್ಕೆಟ್ ಒಳಗಡೆಯೇ ವ್ಯಾಕ್ಸಿನ್ ಹಾಕುತ್ತಾ ಇದ್ದಾರೆ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತಾ ಬಿಬಿಎಂಪಿಯಿಂದ ನಿಯುಕ್ತಿಗೊಂಡ ಮಾರ್ಷಲ್ ಗಳು ಅನೌನ್ಸ್ಮೆಂಟ್ ಕೊಡ್ತಿದ್ದಾರೆ.ಮುಂದಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ವ್ಯಾಕ್ಸಿನ್ ಸರ್ಟಿಫಿಕೇಟ್ ಕೇಳ್ತಾರೆ ಹಾಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತಾ ಅನೌನ್ಸ್ ಮಾಡಿದ್ದಾರೆ. ಹಾಗಾದರೆ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡಲಿಕ್ಕೆ ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯವಾ? ಬಿಬಿಎಂಪಿ ಹೊರ ರೂಲ್ಸ್ ಮಾಡಲಿಕ್ಕೆ ಹೊರಟಿದೆಯಾ ? ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಖರೀದಿ/ ವ್ಯಾಪಾರಕ್ಕೆ ಅವಕಾಶ ನಾ ? ಹೀಗೆ ಅಚ್ಚರಿ ಮೂಡಿಸಿದೆ ಮಾರ್ಷಲ್ ಗಳ ಮೈಕ್ ಅನೌನ್ಸ್ ಮೆಂಟ್. ಇದರ ಮಧ್ಯೆ, ಕೆ.ಆರ್ ಮಾರ್ಕೆಟ್ ವ್ಯಾಪಾರಿಗಳಿಗೆ ವ್ಯಾಕ್ಸಿನೇಷನ್ ಶುರು ಮಾಡಲಾಗಿದೆ. ಬಸ್ ಸ್ಟಾಂಡ್ , ಮಾರ್ಕೆಟ್, ರೈಲ್ವೆ ಸ್ಟೇಷನ್ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಗೆ ತಙ್ಞರ ಸಮಿತಿ ಸಲಹೆ ನೀಡಿತ್ತು. ತಙ್ಞರ ಸಲಹೆಯಂತೆ ವ್ಯಾಕ್ಸಿನೇಷನ್ ಶುರು ಮಾಡಲಾಗಿದೆ ಅನ್ನುತ್ತಿದ್ದಾರೆ ಮಾರ್ಷಲ್ ಗಳು.
ಅಂತಹ ಯಾವುದೇ ಶಿಫಾರಸು ಒಪ್ಪುವುದಿಲ್ಲ: ಆರೋಗ್ಯ ಸಚಿವ ಡಾ. ಸುಧಾಕರ್
ಇನ್ನು ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಇಂತಹ ಯಾವುದೇ ಶಿಫಾರಸು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರೊಲ್ಲ. ಆಂದೋಲನ ಮಾಡಿ ಲಸಿಕೆ ಕೊಡ್ತೀವಿ. ಇನ್ನು, ಕ್ರಿಸ್ ಮಸ್ ಹಾಗೂ ವರ್ಷಾಚರಣೆ ಗೆ ನಿರ್ಬಂಧ ವಿಚಾರವಾಗಿ ಅಗತ್ಯವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಲಸಿಕಾ ಮಿತ್ರ ಹೆಸರಿನಲ್ಲಿ ಲಸಿಕೆ ನೀಡಲಾಗ್ತಿದೆ: ಆರೋಗ್ಯ ಸಚಿವ ಡಾ. ಸುಧಾಕರ್
ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ಮನೆ ಮನೆಗೆ ಲಸಿಕೆ ನೀಡುವ ಕೆಲಸ ಮಾಡ್ತಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲಾಗ್ತಿದೆ. ಲಸಿಕಾ ಮಿತ್ರ ಹೆಸರಿನಲ್ಲಿ ಲಸಿಕೆ ನೀಡಲಾಗ್ತಿದೆ. ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದೂ ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.