ಹೃದಯಾಘಾತಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ-ಅದ್ಯಯನ ವರದಿ
ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ಗೂ, ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.ಲಸಿಕೆ ಹಾಕಿದ ಗುಂಪಿನಲ್ಲಿ 1,047 ಜನರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರೆ 39 ಜನರು ಒಂದೇ ಡೋಸ್ ಪಡೆದಿಲ್ಲ. ಇವರ 30 ದಿನಗಳ ಪರೀಕ್ಷಾ ಅವಧಿಯಲ್ಲಿ 201 ರೋಗಿಗಳಲ್ಲಿ ಎಲ್ಲ ಕಾರಣಗಳಿಂದ ಮರಣವು ಸಂಭವಿಸಿದೆ ಮತ್ತು ಲಸಿಕೆ ಹಾಕಿದ ಗುಂಪಿನಲ್ಲಿ ಮರಣ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. ಇದರಿಂದ ಭಾರತದಲ್ಲಿ ಬಳಸಲಾಗುವ ಲಸಿಕೆಗಳು ಸುರಕ್ಷಿತವಾಗಿವೆ. ಹೃದಯಾಘಾತಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಹೃದಯಾಘಾತದ ನಂತರ ಸಾವಿನ ಸಾಧ್ಯತೆ ಕಡಿಮೆ ಎಂದು ಕಂಡುಹಿಡಿಯಲಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಜಿಬಿ ಪಂತ್ ಆಸ್ಪತ್ರೆಯ ಮೋಹಿತ್ ಗುಪ್ತಾ ಹೇಳಿದ್ದಾರೆ.