ಬೆಂಗಳೂರಿನಲ್ಲಿ ಲಸಿಕೆ ಕೊರತೆ ಇದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ
ಶುಕ್ರವಾರ, 2 ಜುಲೈ 2021 (16:11 IST)
ಬೆಂಗಳೂರಿನಲ್ಲಿ ಪ್ರಸ್ತುತ ಕೊರೊನಾ ಲಸಿಕೆಯ ಕೊರೊತೆ ಇದೆ ಎಂದು ಬೃಹತ್ ಬೆಂಗಳೂರು ನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಪ್ರತಿದಿನ 1.5 ಲಕ್ಷ ಲಸಿಕೆ ಬೇಡಿಕೆಯಿದೆ. ನಮಗೆ ಸಿಗುತ್ತಿರುವುದು 40 ಸಾವಿರ 50 ಸಾವಿರ ಲಸಿಕೆಗಳಷ್ಟೇ ಲಭ್ಯವಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಸಹ ಸುಮಾರು 40 ಸಾವಿರ ಲಸಿಕೆ ಹಾಕಲಾಗುತ್ತಿದೆ. ಕಾಲೇಜ್ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ಎಂಬ ನಿಯಮವೇನಿಲ್ಲ. ಅಂತಹ ನಿಯಮ ಮಾಡಿಲ್ಲ. ನಿನ್ನೆ 61 ಕಾಲೇಜ್ ಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಸರಕಾರ 5ರಿಂದ ಅನ್ ಲಾಕ್ 3 ಘೋಷಿಸಿದರೆ ಆ ತೀರ್ಮಾನಕ್ಕೆ ಬದ್ಧ. ಸಿನಿಮಾ ಟಾಕೀಸ್, ಮಾಲ್ ತೆರೆಯುವ ಬಗ್ಗೆ ಅನುಮತಿ ನೀಡಿದರೆ ನಾವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೆರೆಯಲು ಅವಕಾಶ ನೀಡುತ್ತೇವೆ ಎಂದು ಗೌರವ್ ಗುಪ್ತ ಹೇಳಿದರು.