ಇದಕ್ಕೆ ಉತ್ತಮ ಉದಾಹರಣೆ ಚಿಪ್ಕೊ ಚಳುವಳಿ(Chipko Movement). ಮರಗಳಿದ್ದರೆ ಮಾತ್ರ ಭೂಮಿಯ ಮೇಲೆ ಜೀವದ ಅಸ್ತಿತ್ವ ಸಾಧ್ಯ. ಇಲ್ಲದಿದ್ದರೆ ಸ್ವತಃ ಜೀವಿ ಅಳಿವಿನ ಅಂಚಿಗೆ ತಲುಪಿ ಬಿಡ್ತಾನೆ. ಹಾಗಾಗಿನೇ ದೇಶದಲ್ಲಿ ಅರಣ್ಯದ ಶೇಕಡಾವಾರು ಹೆಚ್ಚಿಸಲು ಸರ್ಕಾರಗಳು ಕೂಡ ಶ್ರಮಿಸುತ್ತಿವೆ. ಈ ಮಧ್ಯೆ ಹೀಗೊಂದು ವಿಐಪಿ ಮರ(VIP tree)ದ ಕುರಿತು ಸಖತ್ ಸುದ್ದಿ ವೈರಲ್ ಆಗ್ತಿದೆ.
ಈ ಮರ ಇರುವುದು ಮಧ್ಯಪ್ರದೇಶದ ರೈಸೆನ್(Raissen) ಜಿಲ್ಲೆಯಲ್ಲಿ.. ಈ ಮರದ ಆರೈಕೆಯ ಬಗ್ಗೆ ತಿಳಿದ್ರೆ ನೀವು ಕೂಡ ಅಚ್ಚರಿ ಪಡ್ತೀರಾ. ಹೌದು, ಇದು ಕೇವಲ ಮರವಲ್ಲ. ಇದೊಂದು ವಿವಿಐಪಿಗಿಂತ ಹೆಚ್ಚು. ಹೌದು ಸ್ವಾಮಿ, ಮರವನ್ನು ರಕ್ಷಿಸೋಕೆ ಅಂತಾನೇ 24 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿ ಕಾವಲು ಕಾಯ್ತಾರೆ. ಅಷ್ಟೇ ಅಲ್ಲ ಮರದ ಒಂದೇ ಒಂದು ಎಲೆ ಉದುರಿದ್ರೂ ಅಧಿಕಾರಿಗಳಿಗೆ ಆ ದಿನ ನಿದ್ರೆ ಬರೋದೆ ಡೌಟು ಅನ್ಸುತ್ತೆ. ಯಾಕಂದ್ರೆ, ಆ ಪಾಟಿ ಕಾಳಜಿ ಮಾಡ್ತಾರೆ ಈ ಮರಕ್ಕೆ. ಇಷ್ಟಕ್ಕೂ ಆ ಮರವಾದ್ರು ಯಾವ್ದು? ಅದಕ್ಯಾಕೆ ಅಷ್ಟೊಂದು ಸೆಕ್ಯೂರಿಟಿ ನೀಡಲಾಗ್ತಿದೆ?