ವಂದೇ ಮಾತರಂ’ಗೆ ಗೌರವ ನೀಡಬೇಕು-ಸುಪ್ರೀಂ ಕೋರ್ಟ್
ದೇಶದ ನಾಗರಿಕರು ರಾಷ್ಟ್ರಗೀತೆ ಜನ ಗಣ ಮನ ಮತ್ತು ರಾಷ್ಟ್ರೀಯ ಗಾಯನ ವಂದೇ ಮಾತರಂಗೆ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಸುಪ್ರೀಂ ಕೋರ್ಟ್‌ನ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಉತ್ತರಿಸಿದ ಗೃಹ ಸಚಿವಾಲಯ ಜನ ಗಣ ಮನ ಮತ್ತು ರಾಷ್ಟ್ರಗೀತೆ ವಂದೇ ಮಾತರಂ ಒಂದೇ ಸಾಲಿನಲ್ಲಿ ನಿಲ್ಲುತ್ತೇವೆ, ಹೀಗಾಗಿ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ದೆಹಲಿ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಲ್ಲಿಸಿದ್ದರು. ಈ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯ ಕೇಂದ್ರ ಸರ್ಕಾರದ ವಕೀಲ ಮನೀಶ್ ಮೋಹನ್ ಮೂಲಕ ಪ್ರತಿಕ್ರಿಯಿಸಿದೆ. ಮುಂದುವರೆದು ವಂದೇ ಮಾತರಂ ಹಾಡುವ ಅಥವಾ ನುಡಿಸುವ ಬಗ್ಗೆ ಯಾವುದೇ ದಂಡದ ನಿಬಂಧನೆಗಳು ಅಥವಾ ಸೂಚನೆಗಳಿಲ್ಲ. ಈ ಹಾಡು ಭಾರತೀಯರ ಭಾವನೆಗಳು ಮತ್ತು ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಹಾಡಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‌ನ ಎಲ್ಲಾ ನಿರ್ದೇಶನಗಳು ಅನುಸರಿಸಲಾಗುತ್ತಿದೆ. ಎರಡಕ್ಕೂ ತನ್ನದೇ ಆದ ಪಾವಿತ್ರ್ಯತೆ ಇದೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.