ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗಧಿ ಮಾಡುವಂತೆ ಒತ್ತಾಯಿಸಿ ನೆನ್ನೆ ಮಧ್ಯಾಹ್ನದಿಂದ ನಂದಿನಿ ಹಾಲು ಸಪ್ಲೈ ಯನ್ನ ಡಿಸ್ಟಿಬ್ಯೂಟರ್ಸ್ ಸ್ಟಾಪ್ ಮಾಡಿದ್ದು.ಕೆಎಂಎಫ್ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ ಮಾಡ್ತಿದ್ದಾರೆ.250 ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರಿಂದ ಸಪ್ಲೈ ಬಂದ್ ಮಾಡಿದ್ದು,ಸದ್ಯ ಒಂದು ಟ್ರಿಪ್ ಗೆ 1000-1200 ರೂಪಾಯಿ ಪಾವತಿ ಮಾಡುತ್ತಿರುವ ಕೆ ಎಂ ಎಫ್ ,ಕಿಲೋಮೀಟರ್ ಆಧಾರದ ಮೇಲೆ ಪಾವತಿ ಹಣವನ್ನ ಹೆಚ್ಚಿಗೆ ಮಾಡುವಂತೆ ಒತ್ತಾಯಿಸಿ ಈ ಸಂಬಂಧ ಆರು ತಿಂಗಳಿಂದ ಕೆಎಂಎಫ್ ಗೆ ಪತ್ರದ ಮೂಲಕ ಪೂರೈಕೆದಾರರು ಮನವಿ ಮಾಡಿದ್ದಾರೆ.ಆದ್ರೂ ಕೆಎಂಎಫ್ ಟ್ರಿಪ್ ಹಣ ಹೆಚ್ಚಿಗೆ ಮಾಡಿಲ್ಲ.ಹೀಗಾಗಿ ಇಂದು ಕೆಎಂಎಫ್ ಹಾಲು ಪೂರೈಕೆದಾರರು , ಲಾರಿ ಮಾಲೀಕರು ಹಾಗೂ ಚಾಲಕರಿಂದ ಪ್ರತಿಭಟನೆ ನಡೆಯುತ್ತಿದೆ.
ಕಳೆದ ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ .ಒಂದು ಟ್ರಿಪ್ ಗೆ ಲಾರಿಗಳು ಸರಾಸರಿ 40 ಕಿಲೋಮೀಟರ್ ಸಂಚಾರ ಮಾಡುತ್ತವೆ.ಒಂದು ಲಾರಿನಲ್ಲಿ 450 ಕ್ರೇಟ್ ಇರಲಿದ್ದು , ಒಂದು ಕ್ರೇಟ್ ನಲ್ಲಿ 12 ಲೀಟರ್ ನಂದಿನಿ ಹಾಲಿನ ಸಾಗಾಟ ಮಾಡಲಾಗುತ್ತೆ.ಸದ್ಯ ಹಲವು ಬೇಡಿಕೆಗೆ ಒತ್ತಾಯಿಸಿ ಹಾಲು ಸಪ್ಲೈ ಯನ್ನ ನಿಲ್ಲಿಸಿ ಲಾರಿ ಮಾಲಿಕರು ಮುಷ್ಕರ ನಡೆಸುತ್ತಿದ್ದಾರೆ.