ಫ್ರೆಶ್ ತರಕಾರಿ ಇಲ್ಲ, ರೇಟೂ ಜಾಸ್ತಿ!
ಸಾಕಷ್ಟು ಕಡೆ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಇದರಿಂದಾಗಿ ತರಕಾರಿ, ಅಗತ್ಯ ವಸ್ತುಗಳ ಮೇಲೂ ಬೆಲೆ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಅಬ್ಬಬ್ಬಾ ಎಂದರೆ 30 ರೂ.ಗೆ ಸಿಗುತ್ತಿದ್ದ ಟೊಮೆಟೋ ದರ ಈಗ 120 ರ ಗಡಿ ತಲುಪಿದೆ. ಅದೂ ಉತ್ತಮ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಎಲ್ಲಾ ತರಕಾರಿ ದರವೂ ಗಗನಕ್ಕೇರಿದೆ. ಹೊರ ರಾಜ್ಯಗಳಿಂದ ಬರುತ್ತಿದ್ದ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದೂ ಇದಕ್ಕೆ ಕಾರಣ. ಇದೀಗ ಮತ್ತೆ ಮಳೆ ಭೀತಿಯಿದ್ದು, ಹೀಗೇ ಮುಂದುವರಿದರೆ ರೈತರ ಜೊತೆಗೆ ಸಾಮಾನ್ಯ ಜನರ ಬದುಕೂ ಸಂಕಷ್ಟಕ್ಕೀಡಾಗಲಿದೆ.