ಜಲಾವೃತವಾಗುವುದನ್ನು ತಡೆಯಲು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

ಮಂಗಳವಾರ, 23 ನವೆಂಬರ್ 2021 (20:45 IST)
ಕೆ.ಆರ್.ಪುರ ಹೊರಮಾವು ಕಟ್ಟಡ ಹೆಬ್ಬಾಳ ವ್ಯಾಲಿ ಪಕ್ಕದಲ್ಲಿರುವ ಬಡಾವಣೆ ಹಾಗೂ ಸುತ್ತಮುತ್ತಲಿನ ವಸತಿಗಳು ಜಲಾವೃತವಾಗುವುದನ್ನು ತಡೆಯಲು ಕಲ್ಕೆರೆ ಕೆರೆ ಕೋಡಿಯನ್ನು ಎರಡು ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರು ಶ್ರೀ ಗೌರವ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿಬಾರಿ ಮಳೆಯಾದಾಗಲೂ ಜಲಾವೃತವಾಗುವುದನ್ನು ತಡೆಯುವ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಹೆಬ್ಬಾಳ ವ್ಯಾಲಿ ಹಾಗೂ ಕಲ್ಕೆರೆ ಪಕ್ಕದಲ್ಲಿ ಬಾಲಾಜಿ ಲೇಔಟ್, ಕಾವೇರಿ ನಗರ, ಸಾಯಿ ಲೇಔಟ್ ಹಾಗೂ ಸುತ್ತಮುತ್ತಲಿನ ಬಡಾವಣೆ, ವಸತಿ ಪ್ರದೇಶಗಳು ತಗ್ಗು ಪ್ರದೇಶದಲ್ಲಿರುವ ಕಾರಣ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಸಂಬಂಧ ಇನ್ನಿತರೆ ಜಲಾವೃತವಾಗುವ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮವನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಕಲ್ಕೆರೆ ಕೆರೆಯ ಕೋಡಿಯನ್ನು ಎರಡು ಅಡಿ ತಗ್ಗಿಸಿದರೆ ಸ್ಥಳದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿರುತ್ತದೆ. ಆದ್ದರಿಂದ ಶಾಶ್ವತ ಪರಿಹಾರ ಕಂಡುಗೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಜೋರು ಮಳೆಯಾದ ವೇಳೆ ಹೆಬ್ಬಾಳ ವ್ಯಾಲಿಯಲ್ಲಿ ಹರಿದು ಬರುವ ನೀರು ಕಾಲುವೆ ತುಂಬಿ ಹಿನ್ನೀರಿನ ವಡ್ಡರಪಾಳ್ಯ, ಸಾಯಿಬಾಬ ಬಡಾವಣೆ, ಅನುಗ್ರಹ ಬಡಾವಣೆ ಜಲಾವೃತಗೊಳ್ಳಲಿವೆ. ಹೆಬ್ಬಾಳ ವಾಲಿಗೆ ಕೆಲವು ಭಾಗದಲ್ಲಿ ಆರ್.ಸಿ.ಸಿ ತಡೆಗೋಡೆ ನಿರ್ಮಿಸಿದ್ದು, ಉಳಿಡೆಯ ಕಚ್ಚಾ ರಾಜಕಾಲುವೆಗೆ ಆರ್.ಸಿ.ಸಿ ತಡೆಗೋಡೆ ನಿರ್ಮಿಸಿ ಬಡಾವಣೆಗಳಿಗೆ ನೀರುಣಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. 
 
ಹೆಬ್ಬಾಳ ವ್ಯಾಲಿ ಹಾದುಹೋಗುವ ಭಾಗದಲ್ಲಿ ರೈಲ್ವೇ ಹಳಿ ಬಳಿ 5 ಮೀಟರ್ ಅಗಲದ 2 ವೆಂಟ್‌ಗಳಿದ್ದು, ಹಾಲಿ ಕಿರಿದಾಗಿರುವ ವೆಂಟ್‌ಗಳನ್ನು ಅಗಲೀಕರಣ ಮಾಡುವ ಕೆಲಸ ಆಗಬೇಕಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು.
 
ತಪಾಸಣೆ ವೇಳೆ ನಗರಾಭಿವೃದ್ಧಿ ಸಚಿವರು ಶ್ರೀ ಭೈರತಿ ಬಸವರಾಜು, ಮಹದೇವಪುರ ವಲಯ ಆಯುಕ್ತರು ಡಾ. ತ್ರಿಲೋಕ್ ಚಂದ್ರ, ಜಂಟಿ ಆಯುಕ್ತರು ವೆಂಕಟಾಚಲಪತಿ, ಮುಖ್ಯ ಇಂಜಿನಿಯರ್ ಗಳಾದ ಪರಮೇಶ್ವರ್, ಸುಗುಣ ಹಾಗೂ ಇನ್ನಿತರೆ ಅಧಿಕಾರಿಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ