ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ನಾಲಿಗೆ ಹರಿಬಿಟ್ಟಿದ್ದಾರೆ. ಸಿದ್ರಾಮಣ್ಣ ಬೇಕಾದ್ದು ತಿನ್ನು, ತುದಿ ಬೇಕಾದ್ರೂ ಕಟ್ ಮಾಡಿಸು ಎಂದು ಅಸಭ್ಯ ಪದ ಬಳಕೆ ಮಾಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಪ್ರತಾಪ್ ಸಿಂಹ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದು ಇದೆ. ಆದರೆ ಈ ಬಾರಿ ಅವರು ಬಳಸಿದ ಶಬ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯನವರು ಹೇಳ್ತಾರೆ, ನಾನು ಯುಗಾದಿ ದಿನನೂ ಮಾಂಸ ತಿಂತೀನಿ, ದೀಪಾವಳಿ ದಿನವೂ ಮಾಂಸ ತಿಂತೀನಿ. ಮಾಂಸ ತಿನ್ನು, ಏನು ಬೇಕಾದ್ರೂ ಮಾಡು ನೀನು, ಬೇಕಿದ್ರೆ ತುದಿ ಕಟ್ ಮಾಡ್ಸು ಬೇಡ ಅನ್ನಲ್ಲ. ಆದರೆ ಯುಗಾದಿ ದಿನ ಮಾಂಸ ತಿಂತೀನಿ, ದೀಪಾವಳಿ ದಿನ ಮಾಂಸ ತಿಂತೀನಿ ಎಂದು ನಮ್ಮ ಹಿಂದೂಗಳ ಭಕ್ತಿ, ಶ್ರದ್ಧೆ ಮೇಲೆ ನೋವುಂಟು ಮಾಡ್ತಾರೆ ಅಂದರೆ ಮುಸಲ್ಮಾನರು 15% ಇದ್ದಾರಲ್ಲಾ ಅವರನ್ನು ಓಲೈಸುತ್ತಿರುತ್ತಾರೆ ಎಂದಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.