ಪ್ರಿಯಕರನ ಪತ್ನಿಯಿಂದ ಪ್ರಿಯತಮೆ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ವಿಡಿಯೋ ಶೂಟ್

ಭಾನುವಾರ, 2 ಫೆಬ್ರವರಿ 2020 (14:46 IST)

ಯುವತಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಆ ಕೃತ್ಯವನ್ನು ವಿಡಿಯೋ ಮಾಡಿರೋ ಅಮಾನವೀಯ ಘಟನೆ ನಡೆದಿದೆ.


ಸಂತ್ರಸ್ತೆಯು ತನ್ನ ಪ್ರಿಯಕರ ಗಿರೀಶ್ ಗೋಸ್ವಾಮಿ ಅಂಡಗಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಎರಡ್ಮೂರು ವರ್ಷ ಇಬ್ರೂ ಪ್ರೀತಿ ಮಾಡಿದ್ದಾರೆ. ಆ ಬಳಿಕ ಯುವತಿ ಬೇರೆ ಕಡೆ ಕೆಲಸಕ್ಕೆ ಹೋಗಿದ್ದಾಳೆ. ಇತ್ತ ಪ್ರಿಯಕರ ಗಿರೀಶ್ ಜಾನು ಎನ್ನೋಳನ್ನು ಮದುವೆಯಾಗಿದ್ದಾನೆ.

ಮದುವೆಯಾದ ಮೇಲೂ ಗಿರೀಶ್ ತನ್ನ ಮೊದಲ ಲವರ್ ಆಗಿಯೋ ಯುವತಿ ಜೊತೆ ಮಾತನಾಡೋಕೆ ಶುರುಮಾಡಿದ್ದಾನೆ. ಇದಕ್ಕೆ ಪತ್ನಿ ಜಾನು ಆಕ್ಷೇಪ ವ್ಯಕ್ತಪಡಿಸಿ ಯುವತಿಗೆ ಬುದ್ಧಿ ಹೇಳಿದ್ದಾಳೆ.

ಆದರೂ ಯುವತಿ ಹಾಗೂ ಪ್ರಿಯಕರ ಗಿರೀಶ್ ಲವ್ವಿ ಡವ್ವಿ ಮುಂದುವರಿಸಿದ್ರು. ಇದರಿಂದ ಕೆರಳಿದ ಪತ್ನಿ ಜಾನು ತನ್ನ ಸಂಬಂಧಿಗಳ ಜೊತೆಗೂಡಿ ಯುವತಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಇದೀಗ ಯುವತಿ ಕೇಸ್ ದಾಖಲು ಮಾಡಿದ್ದು, ಆರೋಪಿಗಳಾದ ಮೂವರು ಮಹಿಳೆಯರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಅಂದ್ಹಾಗೆ ಗುಜರಾತ್ ನಲ್ಲಿ ಈ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ