ಬಿಬಿಎಂಪಿ ವಿರುದ್ದ ರೊಚ್ಚಿಗೆದ್ದ ಆಮ್ ಆದ್ಮಿ ಪಾರ್ಟಿಯಿಂದ ವಿಧಾನಸೌಧ ಮುತ್ತಿಗೆ..!

ಶನಿವಾರ, 19 ನವೆಂಬರ್ 2022 (15:21 IST)
ರಸ್ತೆ ಗುಂಡಿಗಳ ವಿರುದ್ಧ  ಬೆಂಗಳೂರಿಗರು ಇಂದು ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯನ್ನ ಹಮ್ಮಿಕೊಂಡಿದರು.ಆಮ್ ಆದ್ಮಿ ಪಾರ್ಟಿಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು,ಬಿಬಿಎಂಪಿ ಮತ್ತು ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಧಿಕ್ಕಾರ ಧಿಕ್ಕಾರ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಅಸಾಮಾಧಾನ ಹೊರಹಾಕಿದ್ದಾರೆ.
 
ಎಲ್ಲಾ ವಿಚಾರದಲ್ಲೂ ಸರ್ಕಾರ ಪರ್ಸಂಟೇಜ್ ತೆಗೆದುಕೊಳ್ಳುತ್ತಿದೆ.ರಸ್ತೆ ಗುಂಡಿ ವಿಚಾರದಲ್ಲೂ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ.ರಸ್ತೆಗುಂಡಿಗಳಿಂದ ಸಾಲುಸಾಲು ಅಪಘಾತಗಳು, ಸಾವುನೋವುಗಳು ಸಂಭವಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
 
ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭಂಡತನದ ವಿರುದ್ಧ ಆಮ್‌ ಆದ್ಮಿ ಪಾರ್ಟಿ ಬೃಹತ್‌ ಪ್ರತಿಭಟನೆ ಹಾಗೂ  ವಿಧಾನಸೌಧಕ್ಕೆ ಮುತ್ತಿಗೆ  ಕಾರ್ಯಕ್ರಮ ಹಮ್ಮಿಕೊಂಡಿದೆ.ರಸ್ತೆಗುಂಡಿಗೆ ಬಲಿಯಾದವರ ಕುಟುಂಬ ಸದಸ್ಯರು,ಹಲವು ಜನಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆಯ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ