ರಾತ್ರಿ ಹೊತ್ತು ಕಸ್ಟಮರ್ಸ್ ಗೆ ಫುಡ್ ಡೆಲಿವರಿ ಮಾಡೋದಕ್ಕೆ ಹೋಗಬೇಕಾದ್ರೆ ಎಚ್ಚರವಹಿಸಿ..!

ಗುರುವಾರ, 3 ಆಗಸ್ಟ್ 2023 (13:41 IST)
ಸ್ವಿಗ್ಗಿ, ಜಮೋಟೋ .. ಡೆನ್ಜೋ .. ರ್ಯಾಪಿಡೋ ಕಂಪನಿಗಳಲ್ಲಿ  ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾ ಇದಿರಾ ? ಹಾಗಾದ್ರೆ ತಪ್ಪದೇ ಈ ಸ್ಟೋರಿ ನೋಡಿ.. ರಾತ್ರಿ ಹೊತ್ತು ಕಸ್ಟಮರ್ಸ್ ಗೆ ಪುಡ್ ಡೆಲಿವರಿ ಮಾಡೋದಕ್ಕೆ ಹೋಗಬೇಕಾದ್ರೆ  ಸ್ವಲ್ಪ ಎಚ್ಚರವಹಿಸಿ.. ಯಾಕೇಂದ್ರೆ ನೀವೆನಾದ್ರೂ ಸ್ವಲ್ಪ ಯಾಮಾರಿದ್ರು ನಿಮ್ಮ ಮೊಬೈಲ್ ಜೊತೆ ನೀವು ಕೂಡ ಸಂಕಷ್ಟವನ್ನ ಎದುರಿಸಬೇಕಾಗುತ್ತೆ.ಸಿಲಿಕಾನ್ ಸಿಟಿಯಲ್ಲಿ ಡೆನ್ಜೋ. ಸ್ವಿಗ್ಗಿ , ಜಮೋಟೋ ಕಂಪನಿಯಲ್ಲಿ ಕೆಲಸ ಮಾಡಿ ಕೈ ತುಂಬಾ ಸಂಪಾದನೆ ಮಾಡೋ ಅದೆಷ್ಟು ಮಂದಿ ಇದಾರೆ.. ಆದರೆ ಕೆಲವು ಕಿಡಿಗೇಡಿಗಳು ಇಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುವ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಅವರಿಂದ ಹಣ , ಮೊಬೈಲ್ ದೋಚುವ ಕೆಲಸ ಮಾಡ್ತಾ ಇದಾರೆ. ಅಂತ ಖತರ್ನಾಕ್ ಗ್ಯಾಂಗ್ ವೊಂದನ್ನ ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

 ಅಂದ ಹಾಗೇ ಬೈಕ್ ಮೇಲೆ ಕುಳಿತು ಸಿನಿಮಾ‌ ಹೀರೋ ತರ ಪೋಸು ಕೊಟ್ಟಿರೋ ಈ ಕಿಲಾಡಿ ಇದಾನಲ್ಲ ಇವನೇ ಈ ಗ್ಯಾಂಗ್ ನ ಮಾಸ್ಟರ್ ಮೈಂಡ್ ಹೆಸರು ರಾಕೇಶ್ ಅಂತ..‌ಇನ್ನು ಇವನ ಜೊತೆ ಅಮಾಯಕ ತರ ಪೋಸು ಕೊಟ್ಟಿದ್ದನಲ್ಲ ಇವನ ಹೆಸರು ದೀಪಕ್ ಆಲಿಯಾಸ್ ಮಲ್ಲಿಕ್ ಅಂತ.‌‌ ಮೂಲತಹ ಓರಿಸ್ಸಾ ಹಾಗೂ ಅಸ್ಸಾಂ ಕಡೆಯವರು.. ಬೆಂಗಳೂರಿನ ಜಿಗಣಿ ಬಳಿ ವಾಸ ಮಾಡ್ತಿದ್ದ ಇವರು ಒಬ್ಬ ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ರೆ ಮತ್ತೊಬ್ಬ ಎಗ್ ರೈಸ್ ವ್ಯಾಪಾರ ಮಾಡ್ತಿದ್ದರು.

ವ್ಯಾಪಾರ ಮಾಡಿಕೊಂಡು ತಮ್ಮ ಪಾಡಿಗೆ ತಾವು ಇದ್ದಿದ್ರೆ ಇವತ್ತು ಇವರು ಸುದ್ದಿ ಆಗ್ತಾ ಇರಲಿಲ್ಲ.. ಆದರೆ ಈ ಖದೀಮರು ರಾತ್ರಿ ಹೊತ್ತು ಸ್ವಿಗ್ಗಿ, ಜಮೋಟೊ, ಡೆನ್ಜೋ ಪುಡ್ ಡೆಲಿವರಿ ಬಾಯ್ ಗಳನ್ನ ಟಾರ್ಗೆಟ್ ಮಾಡಿ ಅವರು ಲೋಕೇಷನ್ ಗಾಗಿ ಬೈಕ್ ಮುಂದೆ ಇಟ್ಟುಕೊಳ್ಳುತ್ತಿದ್ದ ಮೊಬೈಲ್ ಗಳನ್ನು ಕದಿಯುತ್ತಿದ್ರು.. ನಗರದ ಮಡಿವಾಳ, ಬೊಮ್ಮನಹಳ್ಳಿ, ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 25 ಕ್ಕೂ ಹೆಚ್ಚು ಮೊಬೈಲ್ ಗಳನ್ನು ರಾಬರಿ ಮಾಡಿದ್ರು. ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಸ್ವಿಗ್ಗಿ ಹುಡುಗನ ಮೇಲೆ ಹಲ್ಲೆ ಮಾಡಿ ಮೊಬೈಲ್ ರಾಬರಿ ಮಾಡಿದಾಗ ಈ ಖದೀಮರ ಕೈ ಚಳಕ ಬಯಲಾಗಿತ್ತು.ಸದ್ಯ ಈ ಆರೋಪಿಗಳಿಂದ ಮೂರುವರೆ ಲಕ್ಷ ಬೆಲೆ ಬಾಳುವ 25 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡ್ತಾ ಇದಾರೆ.. ಅದೇನೆ ಇರಲಿ ಇಂತ ಕ್ರಿಮಿಗಳು ನಗರದಲ್ಲಿ ತುಂಬಾ ಮಂದಿ ಇದಾರೆ.. ನೈಟ್ ಹೊತ್ತು ಕೆಲಸ ಮಾಡೋರು ಇಂತವರ ಬಗ್ಗೆ ಎಚ್ಚರವಹಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ