ಕುಮಾರಸ್ವಾಮಿ ಹಾಗೂ ಬಂಗಾರಪ್ಪ ಮಕ್ಕಳು, ಮೊಮ್ಮಕ್ಕಳೇ ರಾಜಕೀಯ ಮಾಡಬೇಕಾ? ವಿಧಾನಸೌಧ ಇವರ ಅಪ್ಪನ ಮನೆಯ? -ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ
ಗುರುವಾರ, 4 ಅಕ್ಟೋಬರ್ 2018 (13:09 IST)
ಧಾರವಾಡ : ರಾಜಕಾರಣ ಬರೀ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಂಗಾರಪ್ಪನಂಥವರಿಗೆ ಮಾತ್ರ ಸೀಮಿತವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮಕ್ಕಳೇ ರಾಜಕೀಯ ಮಾಡಬೇಕಾ? ಎಂದು ಕುಟುಂಬ ರಾಜಕಾರಣದ ವಿರುದ್ಧ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ನವ ನಿರ್ಮಾಣ ಸೇನೆ ಧಾರವಾಡದಲ್ಲಿ ಬುಧವಾರ ಆಯೋಜಿಸಿದ್ದ ಪ್ರತ್ಯೇಕ ರಾಜ್ಯಅಧಿಕಾರಕ್ಕೋ ಅಥವಾ ಅಭಿವೃದ್ಧಿಗೋ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,’ ರಾಜಕಾರಣ ಬರೀ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಂಗಾರಪ್ಪನಂಥವರಿಗೆ ಮಾತ್ರ ಸೀಮಿತವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮಕ್ಕಳೇ ರಾಜಕೀಯ ಮಾಡಬೇಕಾ? ಅವರೇ ಎಂಎಲ್‌ಎ ಆಗಬೇಕಾ? ವಿಧಾನಸೌಧ ಇವರ ಅಪ್ಪನ ಮನೆಯ’ ಎಂದು ಟೀಕಿಸಿದ್ದಾರೆ.
‘ಎಲ್ಲ ಪಕ್ಷದ ರಾಜಕಾರಣಿಗಳೂ ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ. ವಿಧಾನಸೌಧದಲ್ಲಿ ನೀವೇ ತುಂಬಿಕೊಂಡಿರಬೇಕಾ? ನಾವೂ ಚುನಾವಣೆಗೆ ನಿಲ್ಲಬೇಕು, ನಾವೂ ಎಂಎಲ್‌ಎ ಆಗಬೇಕೆಂಬ ಆಸೆ ಯುವಕರಿಗಿದ್ದು ಇದನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ದೇಶದ ದೊಡ್ಡಶಕ್ತಿ ಯುವಕರಾಗಿದ್ದು, ರಾಜ್ಯದ ಭವಿಷ್ಯ ರೂಪಿಸುವಲ್ಲಿ ಪಣತೊಡಿ ಎಂದು ಹೇಳುವುದರ ಮೂಲಕ ಅವರು ರಾಜ್ಯದ ಯುವಕರನ್ನು ಹುರಿದುಂಬಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.