ದರ್ಗಾ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರ ಒತ್ತಾಯ

ಸೋಮವಾರ, 2 ಜುಲೈ 2018 (17:44 IST)
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 6 ವರ್ಷಗಳ ಹಿಂದೆ ಬಸ್ ರಾಪಿಡ ಟ್ರಾನ್ಸ್ಪೋರ್ಟ್ ಸಿಸ್ಟಮ್ ( BRTS ) ಯೋಜನೆ ಅನ್ನು ಅಂದಿನ ಮುಖ್ಯಮಂತ್ರಿ ಜಗದಿಶ ಶೆಟ್ಟರ್ ಅವರು ಜಾರಿಗೆ ತರುವ ಮುಖಾಂತರ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಕ್ಕೆ ಕೈ ಹಾಕಿದಾಗ ಅವಳಿ ನಗರದ ಜನತೆ ಖುಷಿ ಪಟ್ಟಿದ್ದರು. ಆದ್ರೆ 6 ವರ್ಷಗಳಿಂದ ನಡೆಯುತ್ತಿರುವ ಅಮೆಗತಿಯ ಕಾಮಗಾರಿ ದಿಂದ ಇದೊಂದು ಶಾಪವೆಂದು ಜನರು ಭಾವಿಸುತ್ತಿದ್ದಾರೆ.

ಅಂತಹುದರಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೇವಲ ದೇವಸ್ಥಾನಗಳನ್ನು ಮಾತ್ರ ತೆರವು ಗೊಳಿಸಲಾಗುತ್ತಿದ್ದು ಕಾಮಗಾರಿಗೆ ಅಡ್ಡಿಯಾಗಿರುವ ದರ್ಗಾ ತೆರವುಗೊಳಿಸದೆ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿ ಈ ಮೊದಲು ಅನುಮೋದನೆ ಪಡೆದಿರುವ ಯೋಜನೆಯನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು BRTS ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆಗಳ ನಾಯಕ ಸಂಜಯ ಬಡಸ್ಕರ್ ಅವರು ಇದುವರೆಗೆ BRTS ರಸ್ತೆಗಾಗಿ 14 ದೇವಸ್ಥಾನಗಳನ್ನು ತೆರವುಗೊಳಿಸಲಾಗಿದೆ. ಆದ್ರೆ ಈಗ ರಸ್ತೆಯಲ್ಲಿ ಅಡ್ಡಿ ಬರುತ್ತಿರುವ ದರ್ಗಾ ತೆರವುಗೊಳಿಸದೆ ಪೂರ್ತಿ ಯೋಜನೆಯನ್ನು ಮಾರ್ಪಡಿಸಿ BRTS ಸಂಸ್ಥೆಯು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆಯಂತೆ ವರ್ತಿಸಿ ತುಷ್ಟಿಕರಣ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ