ಹುಬ್ಬಳ್ಳಿ-ಧಾರವಾಡ ಉತ್ತರಕ್ಕೆ ಮತ್ತೊಂದು ಕ್ರೀಡಾ ಸಂಕೀರ್ಣ ಮಂಜೂರು

ಶುಕ್ರವಾರ, 20 ಜುಲೈ 2018 (14:38 IST)
ಅವಳಿನಗರದ  ನಗರದ ಜನತೆಯ ಬಹು ಅಪೇಕ್ಷಿತ ಹಾಗೂ  ಕ್ರೀಡಾ ಪಟುಗಳ ನಿರೀಕ್ಷಿತ ಹಾಗೂ ಸುಸಜ್ಜಿತ ವಿವಿದ್ದೋದೇಶ "ಕ್ರೀಡಾ ಸಂಕಿರ್ಣ" ಕ್ಕೆ ಕೇಂದ್ರ ಸರ್ಕಾರದಿಂದ  ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಸಂಸದ ಪ್ರಲ್ಹಾದ ಜೋಶಿ  ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಸಂಸತ್ ಆವರಣದಲ್ಲಿ  ಭೇಟಿಯಾದ ಸಂದರ್ಭದಲ್ಲಿ ಸ್ವತಃ ಸಚಿವ ರಾಜವರ್ಧನ ರಾಥೋಡ ಅವರು ಸಂತಸದ ಸುದ್ದಿ ತಿಳಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. 8 ಕೋಟಿ ರೂ. ಬಿಡುಗಡೆ ಮಾಡಿದ ಕ್ರೀಡಾ ಇಲಾಖೆಯ ಮಂಜೂರಾತಿ ಪತ್ರವನ್ನು ಸಚಿವರು ನೀಡಿದ್ದಾರೆ. ಹಣವನ್ನು ಹಂತ ಹಂತವಾಗಿ ಕರ್ನಾಟಕ ಸರಕಾರದಿಂದ ಕ್ರೀಡಾ ಇಲಾಖೆಗೆ ನೀಡಲಾಗುತ್ತಿದ್ದು, ಯೋಜನೆಯ ಪ್ರಗತಿಯ ಆಧಾರದ ಮೇಲೆ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದ ಸಂಸದ ಜೋಶಿ, ಮೊದಲ ಹಂತದಲ್ಲಿ ರೂ. 3 ಕೋಟಿ ಬಿಡುಗಡೆ ಗೊಳಿಸಲಾಗುವುದು ಎಂದಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಕ್ರೀಡಾ ಸಂಕಿರ್ಣದಿಂದ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಲಿದ್ದು, ಕ್ರೀಡೆಯಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಯುವಕರಿಗೆ ಇದೊಂದು ವರದಾನವಾಗಲಿದೆಯೆಂದು ಸಂತಸ ವ್ಯಕ್ತ ಪಡಿಸಿದರು. ಶೀಘ್ರದಲ್ಲಿಯೇ ಇಡೀ ಉತ್ತರ ಕರ್ನಾಟಕವೇ ಹೆಮ್ಮೆ ಪಡುವಂತಹ ಸುಸಜ್ಜಿತ ಕ್ರೀಡಾ ಸಂಕಿರ್ಣ ನಿರ್ಮಾಣ ಗೊಳ್ಳಲಿದೆ.

ಈಗಾಗಲೇ ತೈಲ ಕಂಪನಿಗಳ ನೆರವಿನಿಂದ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಇಂತಹುದೇ ಸುಸಜ್ಜಿತ ಕ್ರೀಡಾ ಸಂಕಿರ್ಣದ ನಿರ್ಮಾಣಕ್ಕೆ ಚಾಲನೆ  ನೀಡಲಾಗಿದ್ದು. ಎರಡೂ ಕ್ರೀಡಾ ಸಂಕೀರ್ಣ ಕಟ್ಟಡ ನಿರ್ಮಾಣ ಪೂರ್ತಿಗೊಂಡಾಗಲೆ ಅವಳಿ ನಗರವೂ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಕ್ರೀಡಾ ಚಟುವಟಿಕೆಗಳು ಸೆರಿದಂತೆ ಸಾಕಷ್ಟು ಯುವಸಮೂಹದಲ್ಲಿ ಕ್ರೀಡಾ ಆಸಕ್ತಿ ಹೊಂದಲು ಕೇಂದ್ರಿತವಾಗಿ ಹೊರಹೊಮ್ಮುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ