ಬೆಂಗಳೂರು: ವೈದ್ಯರನ್ನು ದೇವರು ಎಂದೇ ಪರಿಗಣಿಸುತ್ತಾರೆ. ಜೀವ ಉಳಿಸುವ ಪ್ರತ್ಯಕ್ಷ ರೂಪದ ದೇವರು ಎನ್ನುವುದಕ್ಕೆ ನಿಜವಾದ ಸಾಕ್ಷಿ ಈ ವಿಡಿಯೋ ಒದಗಿಸುತ್ತದೆ. ಮಗುವೊಂದಕ್ಕೆ ಹೇಗೆ ಜೀವ ನೀಡುತ್ತಾರೆ ನೋಡಿ.
ಆಗ ತಾನೇ ಅಮ್ಮನ ಒಡಲಿನಿಂದ ಭೂಮಿಗೆ ಬರುವ ಮಕ್ಕಳು ತಕ್ಷಣವೇ ಜೋರಾಗಿ ಅಳಬೇಕು. ಇಲ್ಲದೇ ಹೋದರೆ ಅವರು ಬದುಕುವುದು ಕಷ್ಟ. ಕೆಲವೊಂದು ಕಾರಣಕ್ಕೆ ಮಕ್ಕಳು ಹುಟ್ಟಿದ ತಕ್ಷಣ ಅಳುವುದಿಲ್ಲ.
ಅದೇ ರೀತಿ ಇಲ್ಲಿ ಮಗುವೊಂದು ಹುಟ್ಟಿದ ತಕ್ಷಣ ಅಳದೇ ತಟಸ್ಥವಾಗಿತ್ತು. ಹೀಗಾಗಿ ವೈದ್ಯರು ಅದಕ್ಕೆ ತಮ್ಮದೇ ವೈದ್ಯಕೀಯ ಶೈಲಿಯಲ್ಲಿ ತಟ್ಟಿ, ಮೂಗಿನ ಮೂಲಕ ಆಕ್ಸಿಜನ್ ನೀಡಿ ಅಳುವಂತೆ ಮಾಡುತ್ತಾರೆ.
ಆ ಮೂಲಕ ಹುಟ್ಟಿದ ತಕ್ಷಣ ನಿಸ್ತೇಜವಾಗಿದ್ದ ಮಗುವಿಗೆ ಜೀವ ನೀಡುತ್ತಾರೆ. ಮಗು ಉಸಿರಾಡುವಂತೆ ಮಾಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೈದ್ಯರನ್ನು ನಿಜವಾಗಿಯೂ ದೇವರು ಎನ್ನುವುದಕ್ಕೆ ಇದೇ ಸಾಕ್ಷಿ.
Baby brought back to life ????????. Resuscitation.