ಮೈಮರೆತು ವಿದ್ಯಾ ದೇಗುಲದಲ್ಲೇ ಶಿಕ್ಷಕಿಯ ಜತೆ ಸರಸವಾಡಿದ ಪ್ರಾಂಶುಪಾಲ

Sampriya

ಸೋಮವಾರ, 20 ಜನವರಿ 2025 (16:54 IST)
Photo Courtesy X
ಜೈಪುರ: ಚಿತ್ತೋರ್‌ಗಢ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಮೈಮರೆತು ಶಿಕ್ಷಕಿಯೊಬ್ಬರ ಜತೆ ಕಾಮದಾಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೂಡಲೇ ಎಚ್ಚೆತ್ತ ಶಿಕ್ಷಣ ಇಲಾಖೆ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೊಠಡಿಯಲ್ಲೇ ಮೈಮರೆತ ಪ್ರಾಂಶು‍ಪಾಲ ಶಿಕ್ಷಕಿಯ ಜತೆ  ಸರಸವಾಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದ ಹಾಗೇ ಪ್ರಾಂಶುಪಾಲರು ಮತ್ತು ಶಿಕ್ಷಕಿಯ ವಿರುದ್ಧ ದೂರು ಬಂದಿದೆ. ಇಲಾಖೆಯಿಂದ ತನಿಖೆ ನಡೆಯುವವರೆಗೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಚಿತ್ತೋರಗಢದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಹೊರಡಿಸಿರುವ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ತನಿಖೆ ನಡೆಸಲು ಶಿಕ್ಷಣ ಇಲಾಖೆ ಮೂವರು ಅಧಿಕಾರಿಗಳ ಸಮಿತಿಯನ್ನೂ ರಚಿಸಿದೆ.

ಪ್ರಾಥಮಿಕ ಶಿಕ್ಷಣದ ಜಿಲ್ಲಾ ಶಿಕ್ಷಣಾಧಿಕಾರಿ ರಾಜೇಂದ್ರ ಕುಮಾರ್ ಶರ್ಮಾ ಮಾತನಾಡಿ, "ಇಬ್ಬರೂ ಶಿಕ್ಷಕರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ, ಸಂಸ್ಥೆಯ ಮುಖ್ಯಸ್ಥರು ಮುಖ್ಯ ಶಿಕ್ಷಣಾಧಿಕಾರಿಗಳ ಕಚೇರಿಗೆ ವರದಿ ಮಾಡುತ್ತಾರೆ ಮತ್ತು ಶಿಕ್ಷಕರು ಬೇರೆ ಕಚೇರಿಗೆ ವರದಿ ಮಾಡುತ್ತಾರೆ. ಪ್ರಕರಣದ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಮೂರು ಅಧಿಕಾರಿಗಳನ್ನು ರಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ