ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿ ನೆಲದಲ್ಲಿ ಚೆಲ್ಲಾಡಿದ ಬಿರಿಯಾನಿ

Krishnaveni K

ಗುರುವಾರ, 1 ಫೆಬ್ರವರಿ 2024 (08:59 IST)
ಚಿತ್ರದುರ್ಗ: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ಶೋಷಿತ ವರ್ಗದವರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಮಾವೇಶಕ್ಕೆ ಬಂದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಸಾಮಾನ್ಯವಾಗಿ ರಾಜಕೀಯ ಸಮಾವೇಶದಲ್ಲಿ ಸಾರ್ವಜನಿಕರಿಗೆ ಊಟ ನೀಡಲಾಗುತ್ತದೆ. ಅದೇ ರೀತಿ ಚಿತ್ರದುರ್ಗದ ಕಾರ್ಯಕ್ರಮದಲ್ಲೂ ಬಿರಿಯಾನಿ ಊಟ ಹಾಕಿಸಲಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಮೇಲಿನ ದೃಶ್ಯವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೆಲದ ಮೇಲೆ ಚೆಲ್ಲಾಡಿದ ಬಿರಿಯಾನಿ
ಸಮಾವೇಶಕ್ಕೆಂದು ಬಂದವರಿಗೆ ಸಾಕಷ್ಟು ಪ್ರಮಾಣದಲ್ಲಿ ಬಿರಿಯಾನಿ ಊಟ ತಯಾರಿಸಲಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಈ ಬಿರಿಯಾನಿಯನ್ನು ಅಲ್ಲಿಯೇ ನಿರ್ಮಿಸಲಾಗಿದ್ದ ಅಡುಗೆ ಮನೆಯಲ್ಲೇ ನೆಲದ ಮೇಲೆ ಗುಡ್ಡೆ ಹಾಕಲಾಗಿದೆ. ಸಿಕ್ಕ ಸಿಕ್ಕಲ್ಲೆಲ್ಲಾ ಬಿರಿಯಾನಿ ಚೆಲ್ಲಲಾಗಿದೆ. ಅದರ ಮೇಲೆಯೇ ಟ್ರ್ಯಾಕ್ಟರ್ ಒಂದು ಓಡಾಡಿದೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ಗಮನಿಸಿದ ನೆಟ್ಟಿಗರು ಇದೇನಾ ಅನ್ನ ಭಾಗ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶಕ್ಕೆ ಸಾಕಷ್ಟು ಜನ ಬಂದಿದ್ದರು. ಹೀಗಿದ್ದರೂ ಮಾಡಿದ ಅಡುಗೆಯೆಲ್ಲಾ ನೆಲಪಾಲಾಗಿ ಈ ರೀತಿ ಪೋಲಾಗಿದ್ದು ದುರಾದೃಷ್ಟಕರ.

ಇದೇ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಶೋಷಿತರ ವರ್ಗದವರಿಗೆ ಆಗುತ್ತಿರುವ ಅನ್ಯಾಯ ಮತ್ತು ಬಿಜೆಪಿ ವಿರುದ್ಧ ಗುಡುಗಿದ್ದರು. ಇದರ ನಡುವೆ ಇಂತಹದ್ದೊಂದು ಘಟನೆ ನಡೆದಿದ್ದು ನಿಜವೇ ಆಗಿದ್ದಲ್ಲಿ ಅದು ದುರದೃಷ್ಟಕರವೇ ಸರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ