ಡ್ರಗ್ಸ್ ಜಾಲದ ವಿರುದ್ಧ ಸಿಡಿದೆದ್ದ ವಿಶ್ವ ವಿದ್ಯಾಲಯ! 42 ವಿದ್ಯಾರ್ಥಿಗಳ ಅಮಾನತು

ಶುಕ್ರವಾರ, 24 ಫೆಬ್ರವರಿ 2023 (09:28 IST)
ಉಡುಪಿ : ಮಂಗಳೂರಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಶೈಕ್ಷಣಿಕ ಹಬ್ ಆಗಿರುವ ಉಡುಪಿ ಜಿಲ್ಲೆಯಲ್ಲಿಯೂ ಡ್ರಗ್ಸ್ ಸೇವನೆ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ.
 
ಮಣಿಪಾಲದಲ್ಲಿ ಮಾದಕ ವ್ಯಸನಿ ಪ್ರಕರಣಗಳು ಹೆಚ್ಚಾಗಿದ್ದು, ಈ ಸಂಬಂಧ ಮಾಹೆ ವಿವಿಯ 42 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಈ ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಮಾಹೆ ವಿವಿ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದಿಟ್ಟ ನಿರ್ಧಾರದ ಬಗ್ಗೆ ಮಾಹೆ ವಿವಿಯು ಆದೇಶ ಹೊರಡಿಸಿದ್ದು, ಆದೇಶ ಪತ್ರದಲ್ಲಿ ಅಮಾನತಗೆ ಕಾರಣಗಳನ್ನು ತಿಳಿಸಿದೆ. ಸಹಜ ಜೀವನ ನಡೆಸುವ ಉದ್ದೇಶದಲ್ಲಿ ಈ ಆದೇಶವನ್ನು ಹೊರಡಿಸಿದ್ದೇವೆ.

ಆರೊಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪೊಲೀಸ್ ಮತ್ತು ಮಾಹೆ ವಿವಿಯ ಆಂತರಿಕ ತನಿಖೆಯಿಂದ ಮಾದಕ ವ್ಯಸನಿ ಪ್ರಕರಣ ಕಂಡುಬಂದಿದ್ದು,ವಿದ್ಯಾರ್ಥಿಗಳು ಇದನ್ನು ಸೇವನೆ ಮಾಡುವುದನ್ನು ಸಹಿಸಲ್ಲ. ಜೀರೋ ಟಾಲರೆನ್ಸ್ ಇಂತಹ ಪ್ರಕರಣ ಮುಂದುವರೆಯಬಾರದು ಹೇಳಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ