ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಮೀಪದ ಯಾನಾಗುಂದಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ನೀಡಿದರು.
ಅರ್ಜಿಯನ್ನು ಆಲಿಸಿದ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಮೇ 27 ರಂದು ಟ್ರಸ್ಟಿಗಳ ಅರ್ಜಿಯ ವಿಚಾರಣೆ ನಡೆಸಿದೆ ಕೋರ್ಟ್. ಜೂನ 6ರ ಒಳಗಾಗಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ನುರಿತ ಸಿವಿಲ್ ಸರ್ಜನ್ ರ ತಂಡ ರಚಿಸಿ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯ ಸ್ಥಿತಿಗತಿ, ಅವರ ಸುರಕ್ಷತೆ, ಅವರಿಗೆ ನೀಡಿದ ಸೌಲಭ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿದ್ರು.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಸ್ಪಿ ಎಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಹಾಯಕ ಆಯುಕ್ತರಾದ ವೀರಮಲ್ಲಪ್ಪ ಪೂಜಾರ, ತಹಸೀಲ್ದಾರ ಕೀರ್ತಿ ಚಾಲಾಕ ಮತ್ತು ನುರಿತ ವೈದ್ಯರ ತಂಡ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮಕ್ಕೆ ಭೇಟಿ ನೀಡಿದರು. ಅಮ್ಮನವರ ಆರೋಗ್ಯ ಸ್ಥಿತಿಗತಿ, ಅವರಿಗೆ ಟ್ರಸ್ಟ್ ವತಿಯಿಂದ ಕಲ್ಪಿಸಿರುವ ಸೌಲಭ್ಯ ಕುರಿತು ವಿಚಾರಿಸಿದ್ದಾರೆ.
ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಟ್ರಸ್ಟಿಗಳಿಂದ ಮುಕ್ತಿ ಕೊಡಿಸಬೇಕು. ಭಕ್ತರಿಗೆ ಮುಕ್ತ ಮತ್ತು ಅಮ್ಮನವರು ಇರುವವರೆಗೆ ನಿರಂತರ ದರ್ಶನ ಅವಕಾಶ ದೊರೆಯಬೇಕು. ದೂರದಿಂದ ಆದರೂ ಸರಿ, ಪ್ರತಿನಿತ್ಯ ಅಮ್ಮ ಇರುವಷ್ಟು ದಿವಸ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಬೇಕು. ಅಮ್ಮನವರ ಆರೋಗ್ಯದ ತಪಾಸಣೆ ನುರಿತ ವೈದ್ಯರಿಂದ ಮಾಡಿಸಬೇಕು. ಅಮ್ಮನವರು ಗುಣಮುಖರಾಗುವವರೆಗೆ ಮಹಿಳಾ ಭಕ್ತೆ ಅಥವಾ ಕುಟುಂಬದ ಸದಸ್ಯರನ್ನು ನೇಮಿಸಬೇಕು ಎಂಬುದು ಅರ್ಜಿದಾರ ಶಿವಕುಮಾರ ಅವರು ಕೋರ್ಟಗೆ ಕೇಳಿಕೊಂಡಿದ್ದರು.