ವಿ ಆರ್ ಎಲ್ ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯ

ಶನಿವಾರ, 18 ಆಗಸ್ಟ್ 2018 (15:37 IST)
ಚಾಲಕನ ನಿಯಂತ್ರಣ ತಪ್ಪಿ VRL ಬಸ್ ವೊಂದು ಪಲ್ಟಿಯಾದ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರಿಗೆ ಗಾಯಗಳಾಗಿವೆ.

ವಿಆರ್ ಎಲ್ ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ 6 ಜನರಿಗೆ ಗಾಯಗಳಾಗಿವೆ. ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿಯ ಟೊಯೋಟಾ ಶೋರೂಂ ಬಳಿ ಪಲ್ಟಿಯಾಗಿದೆ. ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಬಸ್ ಇದಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ದಾಖಲಿಸಲಾಗಿದೆ. ಈ ಕುರಿತು ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ