ಕಲಬುರಗಿಯಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ರದ್ದು

ಶನಿವಾರ, 18 ಆಗಸ್ಟ್ 2018 (14:55 IST)
ಬಹುನಿರೀಕ್ಷಿತ ಪ್ರಾಯೋಗಿಕ ವಿಮಾನ ಹಾರಾಟ ರದ್ದಾಗಿದೆ. ಇಂದು ನಡೆಯಬೇಕಿದ್ದ ವಿಮಾನ ಹಾರಾಟ ಮುಂದಕ್ಕೆ ಹೋಗಿದೆ.
ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುತ್ತಿದೆ.

ಹೀಗಾಗಿ ಕಲಬುರಗಿ ಏರ್ ಪೋರ್ಟ್ ನಲ್ಲಿ  ಆ. 8 ರಂದು ನಡೆಸಲು ಉದ್ದೇಶಿಸಿದ್ದ ಪ್ರಾಯೋಗಿಕ ವಿಮಾನ ಹಾರಾಟ ರದ್ದುಗೊಂಡಿದೆ. ಆಗಸ್ಟ್ 26ರಂದು ಕಲಬುರಗಿಯಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲು‌ ತೀರ್ಮಾನ ಮಾಡಲಾಗಿತ್ತು. ಆದರೆ ಅಟಲ್ ಜೀ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಂಡಿದೆ ಎಂದು ಕಲಬುರಗಿ‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಕಲಬುರಗಿ ಹೊರವಲಯ ಶ್ರೀನಿವಾಸ್ ಸರಡಗಿ ಬಳಿ ನಿರ್ಮಾಣವಾಗುತ್ತಿರುವ ಏರ್ ಪೋರ್ಟ್ ನಲ್ಲಿ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಏರ್ ಪೋರ್ಟ್ ನಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲು ನಿರ್ಧರಿಸಲಾಗಿತ್ತು. ಏರ್ ಪೋರ್ಟ್ ಉದ್ಘಾಟನೆಗೂ ಮುನ್ನ ನಡೆಸಬೇಕಿದ್ದ ಟ್ರೈಯಲ್ ರನ್ ಆ.26ಕ್ಕೆ ಮುಂದೂಡಿಕೆ ಮಾಡಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ