ಹಸೆಮಣೆ ಏರಬೇಕಿದ್ದ ಜೋಡಿ ಮಸಣ ಸೇರಿತು…
ಬೀದರ್: ಕಾರು ಪಲ್ಟಿಯಾದ ಪರಿಣಾಮ ಹಸೆಮಣೆ ಏರಬೇಕಿದ್ದ ಜೋಡಿ ಸೇರಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಹುಮ್ನಾಬಾದ್ ತಾಲೂಕು ಬಸವಂತಪುರ ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಪ್ರಿಯಾ ಹಾಗೂ ಹಣಮಂತಗೆ ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು. ಹೀಗಾಗಿ ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿರುವ ದತ್ತ ದಿಗಂಬರ ದರ್ಶನಕ್ಕೆ ತೆರಳಿದ್ರು. ದರ್ಶನ ಮಾಡಿ ವಾಪಸ್ ಬರುತ್ತಿರುವಾಗ ಹುಮ್ನಾಬಾದ್ ತಾಲೂಕು ಬಸವಂತಪುರ ಬಳಿ ಈ ಘಟನೆ ನಡೆದಿದೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.