ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಎಡವಟ್ಟು ಉಂಟಾಗಿದೆ. ಪರೀಕ್ಷೆ ದಿನಾಂಕ ನಿಗದಿ ಮಾಡಿ ಮತ್ತೊಂದು ದಿನ ಪರೀಕ್ಷೆ ಮಾಡಲಾಗಿದೆ. ಬಿಕಾಂ 5ನೇ ಸೆಮಿಸ್ಟರ್ ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆ ಒಂದು ದಿನಾಂಕ ನಿಗದಿಪಡಿಸಿ ಮತ್ತೊಂದು ದಿನ ಮಾಡಲಾಗಿದೆ. ಬೆಂಗಳೂರು ವಿವಿ ವಿರುದ್ಧ ವಿದ್ಯಾರ್ಥಿಗಳ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ 80 ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಸಂಕಷ್ಟ ಎದುರಾಗಿದೆ. ಏಪ್ರಿಲ್ 5 ರಂದು ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆಗೆ ಟೈಂ ಟೇಬಲ್ ನೀಡಲಾಗಿತ್ತು. ಆದರೆ ಈ ಪರೀಕ್ಷೆ ಏಪ್ರಿಲ್ 1 ರಂದೇ ನಡೆಸಿರುವ ಆರೋಪ ಕೇಳಿಬಂದಿದೆ. ನಮ್ಮ ಬದುಕಿನ ಜೊತೆ ಏಕೆ ಚೆಲ್ಲಾಟವಾಡ್ತೀರಿ. ಮತ್ತೊಮ್ಮೆ ಪರೀಕ್ಷೆ ನಡೆಸಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.