ಪ್ರಾತ್ಯಕ್ಷಿಕೆ ವೇಳೆ ವಿವಿಪ್ಯಾಟ್‍ನಲ್ಲಿ ದೋಷ; ಅಸಮಾಧಾನ ವ್ಯಕ್ತಪಡಿಸಿದ ವಿವಿಧ ಪಕ್ಷದ ಮುಖಂಡರು

ಗುರುವಾರ, 29 ಮಾರ್ಚ್ 2018 (07:33 IST)
ರಾಯಚೂರು : ರಾಯಚೂರಿನ ಕ್ರಾಫ್ಟ್ ಹಾಲ್‍ನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತ್ತು ಮಾಧ್ಯಮಗಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು, ಈ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ವಿವಿಪ್ಯಾಟ್‍ನಲ್ಲಿ ದೋಷಗಳು ಕಂಡುಬಂದಿರುವ ಮಾಹಿತಿ ತಿಳಿದುಬಂದಿದೆ.


ಈ ಪ್ರಾತ್ಯಕ್ಷಿಕೆ ವೇಳೆಯ ಆರಂಭದಲ್ಲಿ ಬ್ಯಾಲೆಟ್ ಬಾಕ್ಸ್ ಮೂಲಕ 2 ಮತ ಹಾಕಲಾಯಿತು. ಆದರೆ ವಿವಿಪ್ಯಾಟ್ ನಲ್ಲಿ ಯಾವ ಸಂಖ್ಯೆ ಮತ ಹಾಕಲಾಗಿದೆಯೋ ಆ ಸಂಖ್ಯೆ ಕಾಣಿಸದೇ ಬೇರೆ ಸಂಖ್ಯೆ ಕಾಣಿಸಿದೆ. ಈ ದೋಷ ಕಂಡುಬಂದ ಕೂಡಲೇ ವಿವಿಪ್ಯಾಟ್ ಬದಲಿಸಿ ಬೇರೊಂದು ವಿವಿಪ್ಯಾಟ್ ತಂದು ಪ್ರಾತ್ಯಕ್ಷಿಕೆ ನಡೆಸಲಾಯಿತು. ನಂತರ ಒಟ್ಟು 27 ಮತಗಳನ್ನು ಚಲಾವಣೆ ಮಾಡಿದ್ದು ವಿವಿಪ್ಯಾಟ್ ನಲ್ಲಿ ಸರಿಯಾಗಿ ತೋರಿಸಿದೆ.


ಈ ದೋಷಕ್ಕೆ ಇವಿಎಂ ಯಂತ್ರದ ಬ್ಯಾಟರಿ ಕಡಿಮೆಯಿರುವುದು ಅಥವಾ ಪ್ರಿಂಟರ್ ಸಮಸ್ಯೆಯಿಂದ ಹೀಗೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ತಿಳಿಸಿದ್ದಾರೆ. ಆದರೆ ಮತಯಂತ್ರಗಳಲ್ಲಿ ದೋಷಕಂಡುಬಂದಿರುವುದಕ್ಕೆ ವಿವಿಧ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ