ನಕ್ಸಲ್ ದಾಳಿಗೆ ಬಲಿಯಾದ ಯೋಧನ ಕುಟುಂಬಕ್ಕೆ ಸರಕಾರ ನೀಡಿದ ಪರಿಹಾರ ಎಷ್ಟು?
ಬುಧವಾರ, 3 ಜುಲೈ 2019 (18:07 IST)
ನಕ್ಸಲರ್ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ಸರಕಾರ ಪರಿಹಾರ ಚೆಕ್ ವಿತರಿಸಿದೆ.
ಛತ್ತಿಸ್‍ಗಡ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ್ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದ ಸಿ.ಆರ್.ಪಿ.ಎಫ್. ಯೋಧ ಎ.ಎಸ್.ಐ. ಮಹಾದೇವ ಪೊಲೀಸ್ ಪಾಟೀಲ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ವಿತರಿಸಿದೆ.
ಪರಿಹಾರದ ಮೊತ್ತವಾಗಿ 25 ಲಕ್ಷ ರೂ.ಗಳ ಚೆಕ್‍ನ್ನು ಹುತಾತ್ಮ ಮಹಾದೇವ ಪಾಟೀಲ ಅವರ ಪುತ್ರ ಸಂದೀಪ ಪಾಟೀಲಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿತರಿಸಿದ್ರು.
ಕಲಬುರಗಿ ಗ್ರಾಮಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮೂಡ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಅವಿನಾಶ ಜಾಧವ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಇದ್ರು.