ಎಚ್ಚರ : ಈಜಲು ಹೋದ ವ್ಯಕ್ತಿ ಮೇಲೆ ಮೊಸಳೆ ದಾಳಿ

ಗುರುವಾರ, 3 ನವೆಂಬರ್ 2022 (11:38 IST)
ಕಾರವಾರ : ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಮೊಸಳೆಗಳು ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಇಂದು ಬೆಳಗ್ಗೆ ನಡೆದಿದೆ.

ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂಬಾತ ಬೆಳಗ್ಗೆ ಕಾಳಿ ನದಿಯಲ್ಲಿ ಈಜಲು ತೆರಳಿದ್ದ. ದಂಡೆಯ ಮೇಲೆ ಚಪ್ಪಲಿ, ಬಟ್ಟೆಯನ್ನು ಇಟ್ಟು ನದಿಯಲ್ಲಿ ಇಳಿದಿದ್ದಾನೆ. ಈ ವೇಳೆ 2 ಮೊಸಳೆಗಳು ಈತನ ಮೇಲೆ ದಾಳಿ ನಡೆಸಿ ಹೊತ್ತೊಯ್ದಿದೆ.

ಇದನ್ನು ಸ್ಥಳೀಯ ಜನರು ನೋಡಿ ಘಟನೆಗೆ ಸಂಬಂಧಿಸಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ