ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋಗಿ ಬಾಲಕ ಸಾವು
ರೆಸಿಡೆನ್ಷಿಯಲ್ ಪ್ರದೇಶದಲ್ಲಿರುವ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಾಲಕ ಈಜಲು ನೀರಿಗಿಳಿದಿದ್ದ. ಆದರೆ ಆತನಿಗೆ ಸರಿಯಾಗಿ ಈಜಲು ಬರುತ್ತಿರಲಿಲ್ಲ.
ಹೀಗಾಗಿ ನೀರಿಗಿಳಿದ ತಕ್ಷಣವೇ ಆತ ಒದ್ದಾಡಲು ಆರಂಭಿಸಿದ್ದಾನೆ. ತಕ್ಷಣವೇ ಜೊತೆಗಿದ್ದ ಸಂಬಂಧಿ ಆತನನ್ನು ನೀರಿನಿಂದ ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ‍್ಯದಲ್ಲೇ ಬಾಲಕ ಅಸುನೀಗಿದ್ದಾನೆ.