ಬೆಂಗಳೂರು:ಮನುಷ್ಯ ಬದುಕಿರುವಾಗ ನೆಮ್ಮದಿ ಆತನಿಗೆ ಮರೀಚಿಕೆಯಾಗುತ್ತದೆ.ಸತ್ತ ನಂತರ ನೆಮ್ಮದಿ ಸಿಗುತ್ತದೆಎಂದುಎಷ್ಟೋ ಜನ ಬಾಯಿಮಾತಿಗೆ ಮಾತನಾಡುತ್ತಾರೆ.ಆದರೆ ಸತ್ತ ನಂತರವು ನೆಮ್ಮದಿ ಸಿಗದೇ ಗುಂಡಿಯಲ್ಲಿರುವ ಅತ್ಮಗಳು ಗೋಳಾಡುತ್ತಿದೆಯಂತೆ ಆತ್ಮಗಳ ಗೋಳಾಟ ಎಲ್ಲಿ ಡೀಟೆಲ್ಸ್ ಇಲ್ಲಿದೆ ನೋಡಿ.
ಉಲ್ಲಾಳು ವಾರ್ಡ್ ನಲ್ಲಿರುವ ವಳಗೇರಹಳ್ಳಿಯ ಲ್ಲಿರುವ ರುದ್ರಭೂಮಿಯ ಸಮಾಧಿಯೊಳಗೆ ಒಳಚರಂಡಿಯ ಕೊಳಚೆ ನೀರಿನಿಂದ ಆವೃತ್ತವಾಗಿದೆ.ಕಳೆದ ಒಂದು ವಾರದಿಂದ ಕೊಳಚೆ ನೀರು ಸ್ಮಶಾಣದ ಒಳಗೆ ತುಂಬಿದೆ.ಇಲ್ಲಿಯವರೆಗೆ ಜಲಮಂಡಳಿ ಅಧಿಕಾರಿಗಳು ಇತ್ತಕಡೆ ಬಂದಿಲ್ಲ.ಪಿತೃಪಕ್ಷ ನಡೆಯುತ್ತಿರುವುದರಿಂದ ಪೂಜೆಮಾಡಲು ಜನ ಬರುತ್ತಿಲ್ಲ.
ವಳಗೇರಹಳ್ಳಿ.ಕೆಂಗೇರಿ ಉಪನಗರ.ಶಿವನಪಾಳ್ಯ,ಭುವನನಗರ,ಹೊಯ್ಸಳ ನಗರ.ಸೇರಿದಂತೆ ಇನ್ನಿತ್ತರ ಬಡಾವಣೆಗಳಿಂದ ಜನ ಶವ ಸಂಸ್ಕಾರಕ್ಕೆ ಇಲ್ಲಿ ಯೇ ಬರಬೇಕು.ಈ ರುದ್ರಭೂಮಿಯಲ್ಲಿ ಕುಡಿಯಲು ನೀರಿಲ್ಲ.ಶೌಚಾಲಯವಿಲ್ಲ,ಮೂಲಭೂತ ಸೌಲಭ್ಯಗಳಿಲ್ಲಳಿಲ್ಲದೆ ವಂಚಿತರಾಗಿದ್ದಾರೆ.