ಮಹಾರಾಷ್ಟ್ರದಿಂದ ನೀರಿಗೆ ನೀರು ಷರತ್ತು; ಅಧ್ಯಯನಕ್ಕೆ ಮುಂದಾದ ಸಚಿವ ಡಿಕೆಶಿ
‘ನೀರಿಗೆ ನೀರು' ಎಂಬ ಷರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜತರ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ತಾವೇ ಖುದ್ದು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಉಭಯ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಚರ್ಚೆ ನಡೆಸಬೇಕು ಎನ್ನುವುದು ಮಹಾರಾಷ್ಟ್ರ ಸಿಎಂ ಸಲಹೆ. ಜತೆಗೆ ಕರ್ನಾಟಕ ಈಗಾಗಲೇ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರು ತಲುಪಿಲ್ಲ ಎನ್ನುವುದು ಅದರ ದೂರು. ಹೀಗಾಗಿ ಖುದ್ದು ಸ್ಥಳ ಪರಿಶೀಲನೆ ನಡೆಸಲು ಬೆಳಗಾವಿ ಗಡಿಭಾಗಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳ ಕುಡಿಯುವ ಉದ್ದೇಶಕ್ಕೆ ನೀರು ಬಿಡಲು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. 'ನೀರಿಗೆ ನೀರು' ವಿನಿಮಯ ಕುರಿತು ಎರಡೂ ರಾಜ್ಯಗಳ ನಡುವಣ ಒಪ್ಪಂದ ಆಗಬೇಕಿದೆ.
ಅದಕ್ಕೆ ಮೊದಲು ಉಭಯ ರಾಜ್ಯಗಳ ಜಲಸಂಪನ್ಮೂಲ ಸಚಿವರು ಚರ್ಚಿಸಿ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರ ನೀರಾವರಿ ಸಚಿವರ ಜತೆ ಮಾತನಾಡುವ ಮುಂಚಿತವಾಗಿ ರಾಜ್ಯದ ಜಲಾಶಯಗಳ ಪರಿಸ್ಥಿತಿಯನ್ನು ಖುದ್ದಾಗಿ ಅಧ್ಯಯನ ಮಾಡುತ್ತೇನೆ ಎಂದಿದ್ದಾರೆ.