‘ಮಹಾರಾಷ್ಟ್ರಕ್ಕೆ ನೀರು : ಸಿಎಂ ನೀಚ ರಾಜಕಾರಣ ಬಿಡಬೇಕು’

ಶುಕ್ರವಾರ, 18 ಅಕ್ಟೋಬರ್ 2019 (15:48 IST)
ಮಹಾರಾಷ್ಟ್ರದ ಚುನಾವಣೆ ಪ್ರಚಾರದಲ್ಲಿ ರಾಜ್ಯದ ನೀರು ಕೊಡುವುದಾಗಿ ಆಮಿಷ ಒಡ್ಡಿರುವ ಸಿಎಂ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯ ಸರ್ಕಾರದ ವಿರುದ್ಧ ಗುಡುಗಿದೆ ರೈತ ಸಂಘ. ಪ್ರವಾಹ ಸಂತ್ರಸ್ಥರ ಕಣ್ಣೀರು ಒರೆಸುವ ಕೆಲಸ ಬಿಟ್ಟು ರಾಜಕಾರಣ ಮಾಡುತ್ತಿರೋದು ಸರಿ ಅಲ್ಲ. ನಾಡಿನ ಜನ ಸಂಕಷ್ಟದಲ್ಲಿ ಇದ್ದಾರೆ. ಪರಿಹಾರಕ್ಕೆ ಅಲೆಯುತ್ತ ಪಾದಯಾತ್ರೆ ನಡೆಸುತ್ತಿದ್ದಾರೆ.

ಕೃಷ್ಣಾ, ಕಳಸಾ ಬಂಡೂರಿ, ಮಹದಾಯಿ ಮೊದಲು ಆದ್ಯತೆ ಕೊಟ್ಟು ಸಮಸ್ಯೆ ಬಗೆಹರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರೈತರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಚ ರಾಜಕಾರಣ ಮಾಡುವುದನ್ನು ಬಿಟ್ಟು ಮಹದಾಯಿ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಿಎಂ ಸ್ಪಂದಿಸಲಿ.
ತಮ್ಮ ಕಳಪೆ ರಾಜಕಾರಣಕ್ಕೆ ರೈತರನ್ನು ಬಲಿಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷೆ ಜಯಶ್ರೀ ಗುರನ್ನವರ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ