ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾದರೆ ಮನೆಯಿಂದಲೇ ನೀರು ತರಬೇಕು...!

ಬುಧವಾರ, 17 ಅಕ್ಟೋಬರ್ 2018 (18:21 IST)
ಬರಪೀಡಿತ ಪ್ರದೇಶ ಗಡಿನಾಡಿನಲ್ಲಿರುವ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ನೀರಿಲ್ಲದೆ ರೋಗಿಗಳು ಪರದಾಡುವಂತಾಗಿದೆ.

ಪಾವಗಡದಲ್ಲಿ ಡಯಾಲಿಸಿಸ್ ಗಾಗಿ ರೋಗಿಗಳು ದುಬಾರಿ ವೆಚ್ಚ ಮಾಡಿ 100 ಕಿ. ಮೀ ದೂರ ಇರುವ ತುಮಕೂರು ಜಿಲ್ಲಾಸ್ಪತ್ರೆ ಅಥವಾ ಪಕ್ಕದ ಆಂದ್ರಕ್ಕೆ ಹೊಗಬೇಕಾದ ಅನಿರ್ವಾತೆ ಎದುರಾಗಿದೆ. ತುಮಕೂರು‌ ಜಿಲ್ಲೆಯ ಗಡಿ ಭಾಗ ಪಾವಗಡ ತಾಲ್ಲೂಕಿನ  ಜನರ ಅನೂಕೂಲಕ್ಕಾಗಿ ಕಳೆದ ಸರ್ಕಾರ 9 ತಿಂಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಿತು.

ಆದರೆ ಪಾವಗಡ ತಾಲ್ಲೂಕಿನ ನೀರಿನ ಸಮಸ್ಯೆ  ಸರ್ಕಾರಿ ಆಸ್ಪತ್ರೆಯನ್ನು ಆವರಿಸಿದ್ದು ಡಯಾಲಿಸಿಸ್ ಘಟಕಕ್ಕೂ ವ್ಯಾಪಿಸಿದೆ.
ಡಯಾಲಿಸಿಸ್ ಘಟಕಕ್ಕೆ ಪ್ರಮುಖವಾಗಿ ನೀರು, ವಿದ್ಯುತ್ ಅವಶ್ಯಕತೆ ಇದ್ದು ಅದರಲ್ಲೂ ಹೆಚ್ಚಾಗಿ ನೀರಿನ ಅವಶ್ಯಕತೆ ಇದೆ. ದಿನಕ್ಕೆ 8-10 ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ. ಒಬ್ಬ ರೋಗಿಗೆ ಡಯಾಲಿಸಿಸ್ ಮಾಡಲು 120 ಲೀಟರ್ ನೀರು ಖರ್ಚಾಗುತ್ತದೆ. ಹೀಗಾಗಿ ದಿನಕ್ಕೆ ಒಂದು ಸಾವಿರಕ್ಕೂ ಹೆಚ್ಚು ಲೀಟರ್ ನಷ್ಟು ನೀರು ಡಯಾಲಿಸಿಸ್ ಘಟಕಕ್ಕೆ ಅವಶ್ಯಕತೆ ಇದೆ.

ಆಸ್ಪತ್ರೆಗೆ ಪುರಸಭೆ ನೀರು ಪೂರೈಕೆ ಮಾಡುತ್ತಿದ್ದು ಇದು ಆಸ್ಪತ್ರೆ ನಿರ್ವಹಣೆಗೆ ಸಾಕಾಗುತ್ತಿಲ್ಲ. ಇದರಿಂದ ಡಯಾಲಿಸಿಸ್ ರೋಗಿಗಳಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಸುಸಜ್ಜಿತವಾದ ಡಯಾಲಿಸಿಸ್ ಕೇಂದ್ರವಿದ್ರೂ ನೀರಿಲ್ಲದೆ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಕೆಲವು ರೋಗಿಗಳು ಮನೆಯಿಂದಲೇ ನೀರು ತಂದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ