ಲೋಕಾಯುಕ್ತಕ್ಕೆ ಫುಲ್ ಫ್ರೀಡಂ ಕೊಟ್ಟಿದ್ದೇವೆ : ಸಿಎಂ ಬೊಮ್ಮಾಯಿ
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪಡೆದ ಪ್ರಕರಣ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ.ಇನ್ನೂ ಈ ಬಗ್ಗೆ ಇಂದು ಮಾತನಾಡಿದ ಸಿಎಂ ಬೊಮ್ಮಾಯಿ ಮಾಡಾಳ್ ಅವರ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ಮುಕ್ತವಾಗಿ ಕಾರ್ಯನಿರ್ವಹಿಸಲು ನಮ್ಮ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ದಾಳಿ ನಡೆಸಿ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಹಗರಣ ಹೊರಗೆ ಬರುತ್ತದೆ ಎಂದು ಲೋಕಾಯಕ್ತವನ್ನು ರದ್ದು ಮಾಡಿ, ಎಸಿಬಿಯನ್ನು ರಚಿಸಿತ್ತು. ಎಲ್ಲ ಪ್ರಕರಣಗಳಿಗೂ ಕ್ಲಿನ್‌ಚಿಟ್ ನೀಡಿತ್ತು' ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ....ಇನ್ನೂ ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬಗ್ಗೆ ಮಾತನಾ ಈಗಾಗಲೇ ಎಸ್‌ಪಿಜಿ ತಂಡ ವರದಿ ನೀಡಿದೆ..ಪ್ರಧಾನಿಗಳ ಕಚೇರಿಯ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ....ಅವರ ಬಳಿ ಮಾತುಕತೆ ಮಾಡಿ ಎಲ್ಲವನ್ನೂ ಅಂತಿಮಗೊಳಿಸುತ್ತೇನೆ ಎಂದರು