ಪ್ಲೆಕ್ಸ್ ಬ್ಯಾನರ್ ತೆರವಿಗೆ ಧಿಡೀರ್ ಕ್ರಮ ಕೈಗೊಂಡಿದ್ದೇವೆ- ತುಷಾರ್ ಗಿರಿನಾಥ್

ಸೋಮವಾರ, 13 ಮಾರ್ಚ್ 2023 (15:14 IST)
ಪ್ರತಿವಾರವೂ ಪ್ರತ್ಯೇಕ ವಾರ್ಡ್ನ  ಎಲ್ಲಾ ಪಕ್ಷದ ಶಾಸಕರು,ಅಧಿಕಾರಿಗಳು ಸೇರಿ ಮೀಟಿಂಗ್ ಮಾಡುತ್ತೇವೆ.ಎಲ್ಲಾ ವಿಧಾಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಚರ್ಚೆ ಮಾಡಿದ್ದೇವೆ.ಒಂಬತ್ತು ಬಾರಿ ಸಭೆ ನಡೆಸಿದ್ದೇವೆ ಯಾವುದೇ ಆಕ್ಷೇಪಣೆ ಕಂಡುಬಂದಿಲ್ಲ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ಅಲ್ಲದೇ ಪ್ಲೆಕ್ಸ್ ಬ್ಯಾನರ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಪ್ಲೆಕ್ಸ್ ಬ್ಯಾನರ್ ತೆರವಿಗೆ ಧಿಡೀರ್ ಕ್ರಮ ಕೈಗೊಂಡಿದ್ದೇವೆ.ಈಗಾಗಲೇ ೬೦ ಕೇಸ್ ದಾಖಲಾಗಿದ್ದು  ೫೩ ಕೇಸ್ ಪೋಲಿಸ್ ಕಂಪ್ಲೆಂಟ್ ದಾಖಲಾಗಿದೆ .ಕೆಲವು ದಿನಗಳಿಂದ ಪೊಲೀಸ್ ಕಮೀಷನರ್ ಜೊತೆ ಸೇರಿ ಪರಿಶೀಲನೆ ಮಾಡಲು ಮುಂದಾಗಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ