ರೈತರ ಮೇಲಿನ ಕಾಳಜಿ ಬೇರೆಯವರಿಂದ ಕಲಿಯಬೇಕಿಲ್ಲ: ಜಿ.ಪರಮೇಶ್ವರ್

ಮಂಗಳವಾರ, 22 ನವೆಂಬರ್ 2016 (12:42 IST)
ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇದೆ. ರೈತರ ಮೇಲಿನ ಕಾಳಜಿಯನ್ನು ಬೇರೆಯವರಿಂದ ಕಲಿಯಬೇಕಿಲ್ಲ. ನಾವು ರೈತರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
 
ಮಹದಾಯಿ ಹೋರಾಟದ ವೇಳೆ ರೈತರ ಮೇಲೆ ಹಾಕಲಾದ ಪ್ರಕರಣದ ಕುರಿತು ಇಂದು ಸುವರ್ಣಸೌಧದಲ್ಲಿ ನಡೆಯುತ್ತಿರು ವಿಧಾನ ಸಭೆ ಕಲಾಪದಲ್ಲಿ ಚರ್ಚೆ ನಡೆಯಿತು. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ, ಅಮಾಯಕ ರೈತರ ಮೇಲೆ ಡಕಾಯತಿ ಕೇಸ್ ದಾಖಲಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕುವ ಹಕ್ಕು ರಾಜ್ಯ ಸರಕಾರಕ್ಕಿದ್ದೀಯಾ? ಈ ಕೂಡಲೇ ಮಹದಾಯಿ ಹೋರಾಟದಲ್ಲಿ ಬಂಧಿತರಾದ ಅಮಾಯಕ ರೈತರ ಮೇಲಿನ ಪ್ರಕರಣ ಹಿಂಪಡೆಯಿರಿ ಎಂದು ಕುಡಚಿ ಶಾಸಕ ರಾಜೀವ್ ಆಗ್ರಹಿಸಿದರು.
 
ಶಾಸಕ ರಾಜೀವ್ ಅವರ ಮಾತಿಗೆ ಉತ್ತರಿಸಿದ ಗೃಹ ಸಚಿವರು, ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಹೋರಾಟದ ಹೆಸರಿನಲ್ಲಿ 12 ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಹೋರಾಟಗಾರರು ನ್ಯಾಯಾಲಯಕ್ಕೂ ಸಹ ಬೆಂಕಿ ಹಚ್ಚಲು ಮುಂದಾಗಿದ್ದರು. ಈ ಘಟನೆ ನಡೆಯಬಾರದಿತ್ತು. ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ