ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ : ಸಿಎಂ

ಗುರುವಾರ, 15 ಜೂನ್ 2023 (09:29 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ.
 
ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸುತ್ತೇವೆ ಅಂತಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) ಒಪ್ಪಿಕೊಂಡು, ಈಗ ಕೇಂದ್ರ ಸರ್ಕಾರದ ಕೊಡದಂತೆ ತಡೆಹಿಡಿದಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಎಫ್ಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿ ಮಾಡೋದಕ್ಕೆ ನಮ್ಮ ಎಫ್ಸಿಎ ಜತೆ ನಮ್ಮ ಅಧಿಕಾರಿಗಳು ಮಾತಾಡಿದ್ದರು. ನಾನೂ ಕೂಡ ನೇರವಾಗಿ ಮಾತನಾಡಿದ್ದೆ. 10 ಕೆಜಿ ಅಕ್ಕಿ ಕೊಡಲು ನಮಗೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು ಅಂತಾ ಹೇಳಿದ್ದೆ.

ಪ್ರತಿ ಕೆಜಿಗೆ 34 ರೂ. + 2 ರೂ. 60 ಪೈಸೆ ಟ್ರಾನ್ಸ್ಪೋರ್ಟ್ ಶುಲ್ಕ ಸೇರಿ ಒಂದು ಕೆಜಿ ಅಕ್ಕಿಗೆ 36.60 ರೂ.ಗೆ ಖರೀದಿ ಮಾಡಲು ತೀರ್ಮಾನ ಮಾಡಿದ್ದೆವು. ಎಫ್ಸಿಐ ಸಹ ಒಪ್ಪಿಕೊಂಡಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 840 ಕೋಟಿ ರೂ.ನಂತೆ ವರ್ಷಕ್ಕೆ 10,092 ಕೋಟಿ ರೂ. ನಮಗೆ ಬೇಕಾಗುತ್ತದೆ. ನಮ್ಮ ಕ್ಯಾಬಿನೆಟ್ನಲ್ಲೂ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ