ನಮಗೆ ಮಾಧ್ಯಮಗಳ ಮತಗಟ್ಟೆಗಿಂತ ಜನರ ಮತಗಟ್ಟೆ ಮೇಲೆ ನಂಬಿಕೆ: ಪ್ರಿಯಾಂಕ್‌ ಖರ್ಗೆ

sampriya

ಭಾನುವಾರ, 2 ಜೂನ್ 2024 (15:56 IST)
Photo By X
ಕಲಬುರಗಿ: ಈ ಹಿಂದೆ ನಡೆದ ಚುನಾವಣೆಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿದ್ದಾವೆ. ದೇಶದಲ್ಲಿ ಇಂಡಿಯಾ ಒಕ್ಕೂಟ 295 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ 18 ಸ್ಥಾನಗಳು ಬರಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಹೇಳಿರಲಿಲ್ಲ. ಬದಲಾಗಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದಿದ್ದವು. ಆದರೆ, ಫಲಿತಾಂಶ ಬಂದ ಮೇಲೆ ಆಗಿದ್ದೇನು? ಕಾಂಗ್ರೆಸ್ ಪಕ್ಷ 136 ಸ್ಥಾನಗಳಲ್ಲಿ
ಜಯಗಳಿಸಿತ್ತು. ಆಗಲೂ ನಮಗೆ 125 ಸ್ಥಾನಗಳಾದರೂ ಬರುತ್ತವೆ ಎಂಬ ವಿಶ್ವಾಸವಿತ್ತು.

 ನಮಗೆ ಮಾಧ್ಯಮಗಳ ಮತಗಟ್ಟೆಗಿಂತ ಜನರ ಮತಗಟ್ಟೆ ಸಮೀಕ್ಷೆ ಮೇಲೆ ಹೆಚ್ಚಿನ ವಿಶ್ವಾಸವಿದೆ. ಇನ್ನು 48 ಗಂಟೆಗಳಲ್ಲಿ ಫಲಿತಾಂಶವೇ ಹೊರಬೀಳಲಿದೆ. ನಮ್ಮ ಅಂದಾಜಿನ ಪ್ರಕಾರ ಬಿಜೆಪಿ 230 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ  ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ