Exit Poll Result 2024 LIVE: ಕರ್ನಾಟಕಕ್ಕೂ ದೇಶಕ್ಕೂ ಎನ್ ಡಿಎ ಕಿಂಗ್

Krishnaveni K

ಶನಿವಾರ, 1 ಜೂನ್ 2024 (18:48 IST)
ಬೆಂಗಳೂರು: ಲೋಕಸಭೆ ಚುನಾವಣೆ 2024 ರ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿದ್ದು, ಹೆಚ್ಚಿನ ಸಮೀಕ್ಷೆ ಪ್ರಕಾರ ಕರ್ನಾಟಕ ಮತ್ತು ಕೇಂದ್ರದಲ್ಲಿ ಎನ್ ಡಿಎ ಕೂಟವೇ ಕಿಂಗ್ ಆಗಲಿದೆ. ಯಾವ್ಯಾವ ಸಮೀಕ್ಷೆಗಳ ಪ್ರಕಾರ ಯಾವ ಕೂಟಕ್ಕೆ ಎಷ್ಟು ಸಂಖ್ಯೆ ಎಂದು ಇಲ್ಲಿದೆ ಡೀಟೈಲ್ಸ್.


ಲೋಕಸಭೆ ಚುನಾವಣೆ ಫಲಿತಾಂಶಕ್ಕಾಗಿ ಜನ ಎದಿರು ನೋಡುತ್ತಿದ್ದು, ಮೋದಿ ನೇತೃತ್ವದ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೋ, ಇಂಡಿಯಾ ಒಕ್ಕೂಟ ಮ್ಯಾಜಿಕ್ ಮಾಡಬಹುದೇ ಎಂದು ಕುತೂಹಲವಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳಿವೆ.

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನ ಗೆದ್ದು ಬಹುಮತ ಸಾಧಿಸಿತ್ತು. ಎನ್ ಡಿಎ ಕೂಟಕ್ಕೆ 352 ಸ್ಥಾನಗಳು ಸಿಕ್ಕಿದ್ದವು. ಈ ಬಾರಿ 400 ಪ್ಲಸ್ ಗುರಿ ಹಾಕಿಕೊಂಡು ಕಣಕ್ಕಿಳಿದಿರುವ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸದಲ್ಲಿದೆ. ಈ ಬಾರಿ 400 ರ ಗುರಿ ತಲುಪುವುದು ಕಷ್ಟವಾಗಬಹುದು. ಆದರೆ ಚುನಾವಣಾ ಪೂರ್ವ ಹೆಚ್ಚಿನ ಸಮೀಕ್ಷೆಗಳು ಎನ್ ಡಿಎ ಮತ್ತೆ ಅಧಿಕಾರಕ್ಕೇರಬಹುದು ಎನ್ನುತ್ತಿದೆ.

ಇನ್ನೊಂದೆಡೆ ಕಾಂಗ್ರೆಸ್ ನೇತೃತ್ವದ ಯುಪಿಎ ಕಳೆದ ಬಾರಿ ಕೇವಲ 91 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಇಂಡಿಯಾ ಒಕ್ಕೂಟದ ನೇತೃತ್ವದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಅದರಲ್ಲೂ ದಕ್ಷಿಣದ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚು ಮತ ಗಳಿಸುವ ವಿಶ್ವಾಸವಿದೆ. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿರುವುದರಿಂದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕನಿಷ್ಠ 10 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಕಳೆದ ಬಾರಿ ಕೇವಲ ಒಟ್ಟು 28 ಸ್ಥಾನಗಳ ಪೈಕಿ 1 ಸ್ಥಾನ ಮಾತ್ರ ಕಾಂಗ್ರೆಸ್ ಗೆದ್ದಿತ್ತು.ಆದರೂ ಬಹುಮತ ಬಾರದು ಎಂಬುದು ತಜ್ಞರ ಅಭಿಮತ.

ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ 18-20 ಬಿಜೆಪಿ, 4-5 ಕಾಂಗ್ರೆಸ್, ಜೆಡಿಎಸ್ 1-3 ಸ್ಥಾನ ಪಡೆಯಲಿದೆ. ಈ ಮೂಲಕ ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಪಡೆದರೂ ಎನ್ ಡಿಎ ಕೂಟವೇ ಮೇಲುಗೈ ಸಾಧಿಸಲಿದೆ. ನ್ಯೂಸ್ 18 ಇಂಡಿಯಾ ಹಬ್, ರಿಪಬ್ಲಿಕ್ ಟಿವಿ ಸಮೀಕ್ಷೆಯಲ್ಲೂ ಕರ್ನಾಟಕದಲ್ಲಿ ಎನ್ ಡಿಎ ಮೈತ್ರಿಕೂಟ ಆಸುಪಾಸು 20 ಸ್ಥಾನ ಗಳಿಸಲಿದೆ.

ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಆಂಧ್ರದಲ್ಲಿ ಟಿಡಿಪಿಗೆ 13-15 ಸ್ಥಾನ ಸಿಗಲಿದೆ. ಎನ್ ಡಿ 2-4 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಕೇರಳದಲ್ಲಿ ಯುಡಿಎಫ್ ಮೈತ್ರಿಕೂಡ 15 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ಬಿಜೆಪಿ 2, ಡಿಎಂಕೆ 21, ಕಾಂಗ್ರೆಸ್ 8 ಮತ್ತು ಇತರರು 8 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.

ಇಂಡಿಯಾ ನ್ಯೂಸ್ ಸಮೀಕ್ಷೆ ಪ್ರಕಾರ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 371 ಸ್ಥಾನ ಬರಲಿದ್ದು, ಬಹುಮತ ಸಾಧಿಸಲಿದೆ. ಇಂಡಿಯಾ ಮೈತ್ರಿಕೂಟಕ್ಕೆ 125, ಇತರರು 47 ಸ್ಥಾನ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ. ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಬಹುತಮ ಬರಲಿದೆ

ಎಕ್ಸಿಟ್ ಪೋಲ್ ಪ್ರಕಾರ ಒಟ್ಟು ಆರು ಸಮೀಕ್ಷೆಗಳಲ್ಲೂ ಆರರಲ್ಲೂ ಎನ್ ಡಿಎ ಮೈತ್ರಿಕೂಟಕ್ಕೇ ಸ್ಪಷ್ಟ ಬಹುಮತ ಎಂದಿದೆ. ಗುಜರಾತ್ ನಲ್ಲಿ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ. ದಕ್ಷಿಣ ಮತ್ತು ಉತ್ತರ ಭಾರತವನ್ನು ಹೋಲಿಸುವುದಾದರೆ ಇಂಡಿಯಾ ಮೈತ್ರಿಕೂಟಕ್ಕೆ ನಿರೀಕ್ಷೆಯಂತೇ ದಕ್ಷಿಣ ಭಾರತದಲ್ಲೇ ಹೆಚ್ಚು ಸ್ಥಾನ ಸಿಗಲಿದೆ. ಅತ್ತ ಎನ್ ಡಿಎ ಮೈತ್ರಿ ಕೂಟಕ್ಕೆ ದಕ್ಷಿಣದಲ್ಲಿ 60-70 ಸ್ಥಾನ ಸಿಗಬಹುದಷ್ಟೇ. ಹಾಗಿದ್ದರೂ ಇಂಡಿಯಾ ಮೈತ್ರಿಕೂಟಕ್ಕೆ ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳದಲ್ಲಿ ಹೆಚ್ಚಿನ ಸ್ಥಾನ ಸಿಗಹುದು. ಆದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ತೀರಾ ಹಿನ್ನಡೆ ಅನುಭವಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ