ಈ ವೇಳೆ ಮಾತನಾಡಿದ ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಜಾಪ್ರಭುತ್ವ ದಲ್ಲಿ ಜನ ಎನ್ ತೀರ್ಮಾನ ಕೊಡ್ತಾರೆ ಅದನ್ನ ಒಪ್ಪಬೇಕು.ಇವತ್ತು ನಮಗೆ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕೆಂಬುದನ್ನ ಜನ ತೀರ್ಮಾನ ಮಾಡಿದ್ದಾರೆ.ಜನ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸ ಇಟ್ಟಿದ್ದಾರೆ.ಇದನ್ನ ಅವರು ಪೂರೈಸಿಸಬೇಕು.ಪೂರೈಸುವ ಸಂದರ್ಭದಲ್ಲಿ ರಾಜ್ಯದಲ್ಲಿ ಆರ್ಥಿಕ ಸ್ಥಿತಿ ನೋಡ್ಕೋಬೇಕು ಹಾಗೂ ಗ್ಯಾರಂಟಿಗಳನ್ನ ಈಡೇರಿಸಬೇಕು.ವಿರೋಧ ಪಕ್ಷವಾಗಿ ನಾವು ಪ್ರಾಮಾಣಿಕವಾಗಿ ನಡಿಸ್ತೀವಿ.ರಾಜ್ಯಕ್ಕೆ ಅನ್ಯಾಯ ಆದಾಗ ನಾವು ಅದನ್ನ ಹೆಚ್ಚರಿಸುವ ಕೆಲಸವನ್ನ ಮಾಡ್ತೀವಿ.ಕರ್ನಾಟಕ ಒಂದು ಸುಭಿಕ್ಷವಾಗಿರುವ ಒಂದು ನಾಡು.ಕರ್ನಾಟಕ ಅಭ್ಯುದೆಯಾ ಎಲ್ಲ ಆಯಾಮ ಗಳಲ್ಲಿ ನಮ್ಮ ವಿರೋಧ ಪಕ್ಷ ಕೆಲಸ ಮಾಡುತ್ತೆ ಎಂದು ಹೇಳಿದ್ರು.
ಇನ್ನೂ ಎರಡು ಮೂರು ದಿವಸದಲ್ಲಿ ಶಾಸಕರ ಸಭೆ ಕರಿಯಲಿದೆ ಸೋಲಿನ ಪರಮರ್ಶೆ ಆಗಲಿದೆ ನಮ್ಮ ಪಕ್ಷದಲ್ಲಿ ಯಾವುದೇ ನಾಯಕತ್ವದ ಕೊರತೆ ಇಲ್ಲ.ನಮ್ಮ ರಾಜ್ಯದ ಕಾರ್ಯಕ್ರಮವನ್ನು ತಲಿಪಿಸುವಲ್ಲಿ ನಾವು ಹಿಂದೆ ಇದ್ದದ್ದು,ಕಾಂಗ್ರೆಸ್ ಮುಂದೆ ಇದ್ದದ್ದು ಸೋಲಿಗೆ ಕಾರಣ ವಾಗಿರ್ಬೋದು.ನಾವು ಮತ್ತೆ ರಾಜ್ಯದಲ್ಲಿ ಪುಟಿದೆಳುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.