ಕಾಂಗ್ರೆಸ್ ಗ್ಯಾರಂಟಿಗಳಿಗೆ ಸೆಡ್ಡು ಹೊಡೆಯುವ ಗ್ಯಾರಂಟಿ ಕೊಡ್ತೇವೆ : ಯತ್ನಾಳ್

ಗುರುವಾರ, 14 ಸೆಪ್ಟಂಬರ್ 2023 (11:22 IST)
ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಗ್ಯಾರಂಟಿಗಳಿಗೆ ಸೆಡ್ಡು ಹೊಡೆಯುವಂತಹ ಗ್ಯಾರಂಟಿಗಳನ್ನ ನಾವು ಕೊಡ್ತೇವೆ ಅಂತ ಬಸನಗೌಡ ಆರ್ ಪಾಟೀಲ್ ಯತ್ನಾಳ್ ಹೇಳಿದರು.

ಚಿಕ್ಕಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜು ಕಟ್ಟಡ ಪರಿಶೀಲನೆ ಸಂಬಂಧ ಆಗಮಿಸಿದ್ದ ಯತ್ನಾಳ್ ಮಾಧ್ಯಮಗಳ ಜೊತೆ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸೀಟು ಬಿಜೆಪಿ ಗೆಲ್ಲಲಿದೆ ಎಂದರು.

ಇನ್ನೂ ಎಂದೂ ಸಹ ನಾನು ಮಂತ್ರಿಗಿರಿಗಾಗಿ ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ಮಾಡಿದನವಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನನ್ನ ಅರ್ಹತೆ ಹಿರಿತನ ಅಧರಿಸಿ ಪಕ್ಷವೇ ಪರಿಗಣಿಸಬೇಕು. ನಾನು ಎಂದೂ ಯಾವುದಕ್ಕೂ ಒತ್ತಾಯ ಮಾಡುವುದಿಲ್ಲ. ನಾನು ಎಂದೂ ಲಾಬಿ ಮಾಡಿದವನಲ್ಲ. ಕೇಂದ್ರ ಮಂತ್ರಿ ಆದಾಗಲೂ ನಾನು ಲಾಬಿ ಮಾಡಿಲ್ಲ. ವಿಧಾನಸಭೆ ಟಿಕೆಟ್ ಸಲುವಾಗಿಯೂ ನಾನು ಲಾಬಿ ಮಾಡಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ನೇತೃತ್ವದಲ್ಲಿ ಲೊಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯಾಧ್ಯಕ್ಷರ ಅಯ್ಕೆ ವಿಳಂಬ ರಾಜ್ಯದ ಸಮಸ್ಯೆಗಳು ಚುನಾವಣೆ ಮೇಲೆ ಪರಿಣಾಮ ಬರಲ್ಲ. ರಾಜ್ಯದ ಸಮಸ್ಯೆಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಲಿವೆ.

ಕೇಂದ್ರದ ವಿಚಾರದಲ್ಲಿ ಜನ ಒನ್ ನೇಷನ್ ಒನ್ ಲೀಡರ್ ನರೇಂದ್ರ ಮೋದಿ ಅಂತಾರೆ. ಲೋಕಸಭಾ ಚುನಾವಣೆಗೂ ಮುನ್ನ ದೇಶಕ್ಕೆ ದೊಡ್ಡ ಗ್ಯಾರಂಟಿ ಕೊಡಲಿದ್ದೇವೆ. ಆ ಗ್ಯಾರಂಟಿ ಮುಂದೆ ಕಾಂಗ್ರೆಸ್ ಗ್ಯಾರಂಟಿಗಳು ತಡೆಯೋದಿಲ್ಲ. ಚುನಾವಣೆ ಬರಲಿ ನಮ್ಮ ಗ್ಯಾರಂಟಿ ಗಳು ಏನು ಅಂತ ಗೊತ್ತಾಗಲಿದೆ. ದೇಶದ ಹಿತ ಕಾಯುವ ಗ್ಯಾರಂಟಿಗಳನ್ನ ಕೊಡಲಿದ್ದೇವೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ