ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ-ಪರಮೇಶ್ವರ್

ಸೋಮವಾರ, 11 ಸೆಪ್ಟಂಬರ್ 2023 (15:03 IST)
ಖಾಸಗಿ ಆಟೋ,ಕ್ಯಾಬ್ ಬಂದ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಮೊದಲೇ ಎಚ್ಚರಿಕೆ ವಹಿಸಿದ್ದೇವೆ.ಎಲ್ಲೂ ಕೂಡ ದೊಡ್ಡ ಗಲಾಟೆ ಆಗಿಲ್ಲ.ಅವರ ಮದ್ಯದಲ್ಲಿ ಗಲಾಟೆ ಆಗಿವೆ.ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ.ದೊಡ್ಡ ಪ್ರಮಾಣದಲ್ಲಿ ಗಲಾಟೆ ಆಗಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
 
ಇನ್ನೂ ದೇವೇಗೌಡರ ಆರೋಪ ವಿಚಾರವಾಗಿ ಅವರನ್ನ ನಾನು ತುಮಕೂರಿಗೆ ಕರೆದುಕೊಂಡು ಹೋಗಿಲ್ಲ.ಅವರು ಐದು ಸೀಟ್ ಕೇಳಿದ್ರು.ಕಾಂಗ್ರೆಸ್ ವರಿಷ್ಠರು ಕೊಟ್ಟಿದ್ದರು.ಅವರೆ ತುಮಕೂರನ್ನು ಆರಿಸಿಕೊಂಡಿದ್ದು ಅವರು ಬೇಕಿದ್ರೆ ಹೇಳಲಿ, ಆರಿಸಿಕೊಂಡಿಲ್ಲ ಅಂತ ನಾನು ಗೆಲ್ಲಿಸಲು ಬಹಳ ಪ್ರಯತ್ನ ಮಾಡಿದ್ದೇನೆ.ನಮಗೆ ಅವರು ಗೆದ್ದಿದ್ರೆ ಬಹಳ ಖುಷಿ ಆಗ್ತಿತ್ತು.ದುರ್ದೈವ ಅವರು ಗೆಲ್ಲಲಿಲ್ಲ.ಅವರನ್ನು ಕರೆದುಕೊಂಡು ಹೋಗಿದ್ದು ತಪ್ಪೆನಿದೆ.ನಾನೇ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೆ.ಕೆಲವರು ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ.ನಮ್ಮಲ್ಲೇ ಇದ್ದುಕೊಂಡು ಮೋಸ ಮಾಡ್ತಾರೆ.ಕೆಲವರು ಹೊರಗಡೆಯಿಂದ ಮೋಸ ಮಾಡುತ್ತಾರೆ.ಸ್ವತಃ ನನಗೆ ಆ ಅನುಭವ ಆಗಿದೆ.ಬಿಜೆಪಿಯ ಅಧಿಕೃತ ಬಿ ಟೀಮ್ ಆಗಿ ಜೆಡಿಎಸ್ ಆಗಿದೆ  ಪರಮಗಮನಿಸಿದೆ ಎಂದು
ಪರಮೇಶ್ವರ್ ಹೇಳಿದ್ದಾರೆ.
 
ಅಲ್ಲದೇ ಬಿ.ಕೆ.ಹರಿಪಸ್ರಾದ್ ಹೇಳಿಕೆ ವಿಚಾರ ಅದು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ.ನಾನು ಕಾಮೆಂಟ್ ಮಾಡೋದು ಏನಿದೆ.ನನ್ನ ಬಗ್ಗೆ ಹೇಳಿದ್ದಾರೆ ಅವರಿಗೆ ಅಭಿನಂದನೆ.ಎಲ್ಲವೂ ವರಿಷ್ಠರ ಹಂತದಲ್ಲಿ ಚರ್ಚೆ ಆಗೋದು.ಹೈಕಮಾಂಡ್ ಕೂಡ ಹೇಳಿಕೆ ಗಮನಿಸಿದೆ.ಇನ್ನೂ ಬಿಜೆಪಿ,ಜೆಡಿಎಸ್ ಮೈತ್ರಿ ವಿಚಾರ ಕಳೆದ ಬಾರಿ ಬಿಜೆಪಿ ಯಾರ ಜೊತೆ ಮೈತ್ರಿ ಇರಲಿಲ್ಲ.ಗೆದ್ದು ಬಿಡ್ತೇವೆ ಅಂತ ಕಳೆದ ಬಾರಿ ಗೆದ್ರು.ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ.ಅಂದ್ರೆ ವೀಕ್ ಆಗಿದ್ದಾರೆ ಅಂತ ಅಲ್ವಾ?ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ.ಕಾಂಗ್ರೆಸ್ ಗಟ್ಟಿಯಾಗಿದೆ ಅಂತ ಅವರೇ ಹೇಳ್ತಿದ್ದಾರೆ.ನಾವು ರೆಡಿಯಾಗಿದ್ದೇವೆ.೧೩೮ ವರ್ಷದಿಂದ ಪಕ್ಷ ಇದನ್ನ ನೋಡಿಕೊಂಡು ಬಂದಿದೆ.ಯಾವ ಶಕ್ತಿ ಬಂದ್ರು ಕಾಂಗ್ರೆಸ್ ತಡೆಯಲು ಸಾಧ್ಯವಿಲ್ಲ.ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಅನ್ನೋದು ಸಾಧ್ಯವಿಲ್ಲ ಎಂದು ಪರಮೇಶ್ವರ್ ಟಾಂಗ್ ನೀಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ