ಜನಪರ ಬಜೆಟ್ ಮಂಡಿಸುತ್ತೇವೆ- ಸಿಎಂ

ಬುಧವಾರ, 1 ಫೆಬ್ರವರಿ 2023 (13:47 IST)
ಕೇಂದ್ರ ಬಜೆಟ್ ನಿರೀಕ್ಷೆಗಳ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದು,ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತದ ಆರ್ಥಿಕತೆ 6.8% ಆಗುವ ನಿರೀಕ್ಷೆ ಇದೆ.ಅದರ ಹಿನ್ನೆಲೆಯಲ್ಲಿ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ಬಜೆಟ್ ಇರುತ್ತೆ.ದೇಶದಲ್ಲಿರುವ ಬೇರೆ ಬೇರೆ ವಲಯಗಳಿಗೆ ಆಧ್ಯತೆ‌ ನೀಡಿ ಜನಪರ ಬಜೆಟ್ ಆಗಿರುತ್ತೆ.ದೇಶದ ಆರ್ಥಿಕತೆಗೆ ಬೂಸ್ಟ್ ಸಿಕ್ಕಿದರೆ ಅದರ ಲಾಭ ಪ್ರತಿಯೊಬ್ಬ ನಾಗರೀಕನಿಗೂ ಸಿಗುತ್ತೆ.ಯಾವುದೇ ಹೊರೆ ಇಲ್ಲದೇ ಜನಪರ ಬಜೆಟ್ ಅನ್ನು ನಿರೀಕ್ಷೆ ಮಾಡ್ತಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.
 
ಅಲ್ಲದೇ ಈ ವೇಳೆ ಸಿಎಂ  ರಮೇಶ್ ಜಾರಕಿಹೊಳಿ ಜತೆ ಮಾತಾಡೋಕ್ಕೆ ಆಗಿಲ್ಲ.ಅವರು ಇವತ್ತು ಬಂದಿದ್ರು ನಿಜ.ಆದ್ರೆ ಬೇರೆ ಬೇರೆ ಕಾರ್ಯಕ್ರಮ ಇದ್ದಿದ್ದರಿಂದ ಮಾತಾಡ್ಲಿಲ್ಲ.ಆಮೇಲೆ‌ ಬರ್ತೀನಿ‌ ಅಂತ ಹೇಳಿದೀನಿ ಎಂದು ಸಿಎಂ ಹೇಳಿದ್ರು.
 
ಸಿಡಿ ಪ್ರಕರಣ ಸಿಬಿಐಗೆ ಕೊಡುವ ವಿಚಾರವಾಗಿ ಈ ಕೇಸ್ ಬಗ್ಗೆ ಇನ್ನೂ‌  ಮಾಹಿತಿ ಇಲ್ಲ.ಮಾಹಿತಿ ಬಂದ ಮೇಲೆ ನೋಡ್ತೇವೆ.ಕಾನೂನು ತನ್ನ ಕೆಲಸ ಮಾಡುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ