ಮುಂದಿನ ವಾರಂತ್ಯದ ರಜೆಗೆ ಇಂದೇ ಸಿದ್ಧರಾಗಿ

ಶನಿವಾರ, 15 ಫೆಬ್ರವರಿ 2020 (09:11 IST)
ಬೆಂಗಳೂರು: ಮತ್ತೆ ವೀಕೆಂಡ್ ನಲ್ಲಿ ರಜೆಯ ಮಜಾ ಅನುಭವಿಸುವ ಕಾಲ ಬಂದಿದೆ. ಮುಂದಿನ ವಾರಂತ್ಯದಲ್ಲಿ ಸಾಲು ಸಾಲಾಗಿ ಮೂರು ದಿನ ರಜೆ ಇದ್ದು ಇಂದೇ ರಜೆಯ ಪ್ಲ್ಯಾನ್ ಮಾಡಿಕೊಳ್ಳಬಹುದು.


ಫೆಬ್ರವರಿ 21 ರಂದು ಶುಕ್ರವಾರ ಶಿವರಾತ್ರಿ ನಿಮಿತ್ತ ರಜೆಯಿದ್ದು, ಮತ್ತೆರಡು ದಿನ ಹೇಗಿದ್ದರೂ ವಾರಂತ್ಯದ ಎರಡು ದಿನದ ರಜೆಯಿದೆ. ಹೀಗಾಗಿ ಊರಿಗೆ ಹೊರಡುವುದಿದ್ದರೆ ಇಂದೇ ಪ್ಲ್ಯಾನ್ ಮಾಡಿ.

ಇದಾದ ಬಳಿಕ ಸದ್ಯಕ್ಕೆ ನಿಮಗೆ ವಾರಂತ್ಯದಲ್ಲಿ ಈ ರೀತಿ ರಜೆಯಿಲ್ಲ. ಹೀಗಾಗಿ ಈಗಾಗಲೇ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಜನ ಪ್ರಿ ಬುಕಿಂಗ್ ಆರಂಭಿಸಿದ್ದಾರೆ. ಹೀಗಾಗಿ ವಾರಂತ್ಯದಲ್ಲಿ ಕೆಎಸ್ ಆರ್ ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಬೇಕಾದೀತು. ಇಂದೇ ಆ ಮೂರು ದಿನದ ರಜೆಗೆ ಸಿದ್ಧರಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ