ಹಾಲು ಕೊಡುತ್ತಿರುವ ಮರಿ ಯಾವುದು ಗೊತ್ತಾ?
ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವ ವಿಚಿತ್ರ ಘಟನೆ ನಡೆದಿದೆ. ಪುಟ್ಟ ಮರಿ ಎಲ್ಲರ ಗಮನ ಸೆಳೆಯುತ್ತಿದೆ. ಜನರು ತಂಡೋಪ ತಂಡವಾಗಿ ಹಾಲು ಕೊಡುತ್ತಿರುವ ಮರಿಯನ್ನು ವೀಕ್ಷಿಸಲು ಬರುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಅಚ್ಚರಿ ನಡೆದಿದೆ. ಹಿರೇಕುಂಬಿ ಗ್ರಾಮದ ಮಕ್ತುಮ್ ಸಾಬ್ ಲಗಳಿ ಎಂಬುವರ ಮನೆಯಲ್ಲಿ ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಆದರೆ ದಿನ ಕಳೆದಂತೆ ಮರಿಯ ಕೆಚ್ಚಲು ದೊಡ್ಡದಾಗುತ್ತಾ ಬಂದಿದೆ. ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವುದು ಅಚ್ಚರಿ ತಂದಿದೆ. ಮಕ್ತುಮ್ ಸಾಬ್ ಮಾತ್ರ ದಿನಕ್ಕೆ ಎರಡು ಬಾರಿ ಹಾಲು ಕರಿಯುತ್ತಿದ್ದಾರೆ.
ಕರಿದ ಹಾಲನ್ನು ಸಾಕು ನಾಯಿಗೆ ಕುಡಿಸುತ್ತಾ ಬಂದಿದ್ದಾರೆ. ಇನ್ನು ಪಶು ವೈದ್ಯರ ಬಳಿ ತೋರಿಸಿದಾಗ ಇದೊಂದು ವಿಸ್ಮಯ ಎಂದು ಅವರಿಗೆ ಹೇಳಿದ್ದಾರೆ. ಆದರೆ ಗ್ರಾಮಕ್ಕೆ ಜನರು ತಂಡೋಪ ತಂಡವಾಗಿ ಮೇಕೆ ಮರಿ ನೋಡಲು ಮನೆಗೆ ಬರುತ್ತಿದ್ದಾರೆ.