ಬೆಂಗಳೂರು: ರಸಗುಲ್ಲಾ ಇದು ಭಾರತೀಯ ಸಿಹಿ ತಿಂಡಿಗಳಲ್ಲಿ ಒಂದು. ಬಾಯಲ್ಲಿ ನೀರೂರಿಸುವ ಈ ತಿನಿಸು ಮಾಡುವುದಕ್ಕೆ ಇನ್ನೂ ಸುಲಭ. ಮಾಡುವ ಬಗೆ ಇಲ್ಲಿದೆ ನೋಡಿ.
ಸಾಮಾಗ್ರಿಗಳು
ಹಾಲು -1ಲೀಟರ್
ಸಕ್ಕರೆ -2ಕಪ್
ಐಸ್ ಕ್ಯೂಬ್ಸ್ 10
ಲಿಂಬೆ ರಸ -1 ಚಮಚ
ನೀರು ೩ ೧/೨ ಕಪ್
ಏಲಕ್ಕಿ ಪುಡಿ -1/2ಚಮಚ
ಪಿಸ್ತಾ ಅಲಂಕಾರಕ್ಕೆ
ಮೈದಾ ಹಿಟ್ಟು ೨ ಚಮಚ
ಮಾಡುವ ವಿಧಾನ
ಹಾಲನ್ನು ಕುದಿಯಲು ಬಿಡಬೇಕು.ಹಾಲು ಕುದಿಯಲು ಶುರುವಾದ ನಂತರ ಲಿಂಬೆ ರಸ ಹಾಕಿ ಚೆನ್ನಾಗಿ ತಿರುವಿ. ಹಾಲಿನಿಂದ ನೀರು ಬೇರೆಯಾದ ಮೇಲೆ ಉರಿ ಆರಿಸಬೇಕು. ನಂತರ ಐಸ್ ಕ್ಯೂಬ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಒಂದು ಕಾಟನ್ ಬಟ್ಟೆಯಲ್ಲಿ ಒಡೆದ ಹಾಲನ್ನು ಸೋಸಿ ಚೆನ್ನಾಗಿ ತೊಳೆದು ನೀರು ಸಂಪೂರ್ಣವಾಗಿ ಬಸಿಯಲು ಬಿಡಿ. ಅರ್ಧ ಗಂಟೆಯ ಬಿಟ್ಟು ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೈದಾ ಮತ್ತು ೧/೨ ಚಮಚ ಸಕ್ಕರೆ ಹಾಕಿ ಚೆನ್ನಾಗಿ ನಾದಿ. ನಾದಿದ ಪನಿರನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ. ಒಂದು ಕುಕ್ಕರ್ ನಲ್ಲಿ ಸಕ್ಕರೆ,ಏಲಕ್ಕಿ ಪುಡಿ ಮತ್ತು ನೀರನ್ನು ಹಾಕಿ ಸಕ್ಕರೆ ಪಾಕ ತಯಾರಿಸಿ.
ಮತ್ತು ಆ ಪಾಕಕ್ಕೆ ಪನೀರ್ ಉಂಡೆಗಳನ್ನು ಹಾಕಿ. ನಂತರ ಕುಕ್ಕರ್ ಮುಚ್ಚಳ ಮುಚ್ಚಿ ೧ ಕೂಗು ಕೂಗಿಸಬೇಕು. ನಂತರ ಉರಿ ಸಣ್ಣ ಮಾಡಿ ೫ ನಿಮಿಷ ಬಿಡಬೇಕು. ೫ ನಿಮಿಷದ ನಂತರ ಉರಿ ಆರಿಸಿ ತಣಿಯಲು ಬಿಡಿ. ತಣ್ಣಗಾದ ನಂತರ ಸರ್ವ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ