ನವವಿವಾಹಿತೆ ಹೆಣವಾದ ಕಾರಣವಾದ್ರು ಏನು?

ಗುರುವಾರ, 1 ಜುಲೈ 2021 (10:54 IST)
ಚಿಕ್ಕಮಗಳೂರು : ಮದುವೆಯಾದ ಮೂರೇ ತಿಂಗಳಲ್ಲಿ ನವವಿವಾಹಿತೆ ಅನುಮಾನಾಸ್ಪದವಾಗಿ  ಸಾವನ್ನಪ್ಪಿದ್ದು, ಕುಟುಂಬಸ್ಥರು ಗಂಡನ ವಿರುದ್ದವೇ ಕೊಲೆ ಆರೋಪ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾ ಏರಿಯಾದಲ್ಲಿ ನಡೆದಿದೆ.















 
ಮೃತಳನ್ನು 22 ವರ್ಷದ ಸಿಮ್ರನ್ ಎಂದು ಗುರುತಿಸಲಾಗಿದೆ. ಮೃತ ಸಿಮ್ರನ್ ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನವಳು.
ಕಳೆದ ಮೂರು ತಿಂಗಳ ಹಿಂದಷ್ಟೇ ನಗರದ ಪೆನ್ಷನ್ ಮೊಹಲ್ಲಾ ನಿವಾಸಿ ಪೈಂಟರ್ ವೃತ್ತಿ ಮಾಡುತ್ತಿದ್ದ ಫೈರ. ಆದರೆ, ಇಂದು ಆಕೆಯ ಮೃತದೇಹ ಗಂಡನ ಮನೆಯ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದ್ದು ಸಿಮ್ರನ್ ಮನೆಯವರು ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಸಿಮ್ರನ್ ಪೋಷಕರು ಮಗಳಿಗೆ ಏನೂ ಕೊರತೆಯಾಗಬಾರದು ಎಂದು ಇದ್ದ ಮನೆಯನ್ನೂ ಮಾರಿ ಮದುವೆ ಮಾಡಿದ್ದಾರೆ. ಆದರೆ, ಆರೋಪಿ ಫೈರೋಜ್ ಚಿನ್ನದ ನೆಕ್ಲೇಸ್ ಬೇಕೆಂದು ಹಿಂಸೆ ಕೊಡುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಜೊತೆಗೆ ಆತನಿಗೆ ಈ ಮೊದಲೇ ಬೇರೆ ಮದುವೆಯಾಗಿತ್ತು. ಅಕ್ರಮ ಸಂಬಂಧವೂ ಇತ್ತು ಎಂದು ಫೈರೋಜ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಿನ್ನೆ ರಾತ್ರಿಯಷ್ಟೆ ತಂದೆ ಮನೆಯಿಂದ ಬಂದಿದ್ದ ಸಿಮ್ರನ್ ಇಂದು ಬೆಳಗ್ಗೆಯಿಂದಲೂ ನಾಪತ್ತೆಯಾಗಿದ್ದಳು. ಯಾವಾಗ ಆಕೆ ಮನೆಯಲ್ಲಿ ಇರಲಿಲ್ಲ. ಆಗ ಗಂಡನ ಮನೆಯವರು ಸಿಮ್ರನ್ ಮನೆಯವರಿಗೆ ಫೋನ್ ಮಾಡಿ ನಿಮ್ಮ ಮಗಳು ಮನೆಯಲ್ಲಿ ಇಲ್ಲ. ಬುರ್ಖಾ ಕೂಡ ಇಲ್ಲ. ಎಲ್ಲೋ ಹೋಗಿದ್ದಾಳೆ ಎಂದು ವಿಷಯ ಮುಟ್ಟಿಸಿದ್ದಾರೆ. ಆತಂಕದಿಂದ ಬಂದ ಸಿಮ್ರನ್ ಪೋಷಕರು ಇಡೀ ಮನೆ ಹುಡುಕಿದ್ದಾರೆ. ನೆಂಟರಿಷ್ಟರಿಗೆಲ್ಲಾ ಫೋನ್ ಮಾಡಿದ್ದಾರೆ. ಸ್ನೇಹಿತರಿಗೂ ಕೇಳಿದ್ದಾರೆ. ಆಕೆಯ ಸುಳಿವೂ ಎಲ್ಲೂ ಸಿಗಲಿಲ್ಲ. ಆಗ ಮೃತಳ ಸಹೋದರ ಮನೆಯ ಸುತ್ತಲೂ ಹುಡುಕಿ ಅನುಮಾನಗೊಂಡು ನೀರಿನ ಟ್ಯಾಂಕ್ ನೋಡಿದಾಗ ಅದರಲ್ಲಿ ಸಿಮ್ರನ್ ಮೃತದೇಹವಿತ್ತು. ಆಗ ಗಂಡನ ಮನೆಯವರ ಮೇಲಿನ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ, ಫೈರೋಜ್ ಮನೆಯವರು ಬುರ್ಖಾ ತೆಗೆದುಕೊಂಡು ಹೋಗಿದ್ದಾಳೆ. ಬುರ್ಖಾ ಇಲ್ಲ ಎಂದು ಹೇಳಿದ್ದರು. ಆದರೆ, ನೀರಿನ ತೊಟ್ಟಿಯಲ್ಲಿದ್ದ ಆಕೆ ಮೃತದೇಹದ ಮೇಲೆ ಬುರ್ಖಾ ಇರಲಿಲ್ಲ. ಆಕೆ ರಾತ್ರಿ ಇದ್ದ ಉಡುಗೆಯಲ್ಲಿ ಇದ್ದಾಳೆ. ಇವರೇ ಕೊಲೆ ಮಾಡಿದ್ದಾರೆಂದು ಸಿಮ್ರನ್ ಪೋಷಕರು ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನೂ ಹೆಚ್ಚಿನ ಹಣ, ಒಡವೆ ಕೇಳಿದರೆ ಭಿಕ್ಷೆ ಬೇಡಿ ಕೊಡುತ್ತಿದ್ದೇವು. ನಮ್ಮ ಮನೆಗೆ ಕಳಿಸಿದ್ದರೆ ನಾವು ನೋಡಿಕೊಳ್ಳುತ್ತಿದ್ದೇವು. ಆದರೆ, ಮೂರೇ ತಿಂಗಳಿಗೆ ಹೀಗೆ ಕೊಲೆ ಮಾಡಿರೋ ಆತ ಭೂಮಿ ಮೇಲೆ ಬದುಕಬಾರದು. ಆತನನ್ನ ಗಲ್ಲಿಗೇರಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.  ಪ್ರಕರಣ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ